16 ಕಿ.ಮಿ ಓಟದ ಮೂಲಕ ಸಚಿವ ಎಂಬಿಪಿ ಹುಟ್ಟುಹಬ್ಬ ಆಚರಣೆ
ಸಪ್ತ ಸಾಗರ ವಾರ್ತೆ,ವಿಜಯಪುರ, ಅ.7: ವಿಜಯಪುರ ಹೊರವಲಯದ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ 16 ಕಿ.ಮೀ ಓಡುವ ಮೂಲಕ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು ಸಚಿವ ಎಂ.ಬಿ.ಪಾಟೀಲ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.ಇಂದು ಬೆಳಗ್ಗೆ 6 ಗಂಟೆಗೆ ಬಿ.ಎಂ. ಪಾಟೀಲ ವೃತ್ತದಿಂದ ಓಟ ಆರಂಭಿಸಿದ ಸದಸ್ಯರು, ಸೋಲಾಪುರ, ಅರಕೇರಿ ರಸ್ತೆ ಮೂಲಕ ಭೂತನಾಳ ಕೆರೆ ಪರಿಸರದಲ್ಲಿ, ಕರಾಡ ದೊಡ್ಡಿ ಅರಣ್ಯದಲ್ಲಿ ಓಡುತ್ತ, ಬಿ.ಎಂ.ಪಾಟೀಲ ವೃತ್ತಕ್ಕೆ ಮರಳಿದರು. ಒಟ್ಟು 16 ಕಿ.ಮೀ ಓಟದಲ್ಲಿ 15 ಕ್ಕೂ ಹೆಚ್ಚು…


