ಸೆ. 26ರಂದು ಬೃಹತ್ ಉದ್ಯೋಗ ಮೇಳ

ಸಪ್ತ ಸಾಗರ ವಾರ್ತೆ, ವಿಜಯಪುರ, ಸೆ.18:ಅಂತರ್ ರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ ಕಾನ್, ವಿಜಯಪುರದ ಬಿಎಲ್.ಡಿ.ಇ ಸಂಸ್ಥೆ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸೆ. 26ರಂದು ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.2024 ಮತ್ತು 2025 ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಇ ಮತ್ತು ಡಿಪ್ಲೋಮಾ ಪದವಿಯ ಮೆಕ್ಯಾನಿಕಲ್, ಇಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಇಲೇಕ್ಟ್ರಾನಿಕ್ಸ್ ಇಲೆಕ್ಟ್ರೀಕಲ್ಸ್ ವಿಭಾಗಗಳಲ್ಲಿ ತೇರ್ಗಡೆ ಹೊಂದಿರುವ ವಿಜಯಪುರ ಹಾಗೂ ಸುತ್ತಲಿನ ಪ್ರದೇಶಗಳ ಎಲ್ಲ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು, ಈ…

Read More

ಗುಣಮಟ್ಟದ ಸೇವೆ ನೀಡುವಲ್ಲಿ ಬಿ ಎಲ್ ಡಿ ಇ ಆಸ್ಪತ್ರೆ ಮುಂಚೂಣಿಯಲ್ಲಿ: ಬಸನಗೌಡ ಪಾಟೀಲ

ಸಪ್ತ ಸಾಗರ ವಾರ್ತೆ ವಿಜಯಪುರ, ಸೆ. 17: ಬಿ.ಎಲ್.ಡಿ.ಇ ಆಸ್ಪತ್ರೆ ಬಡವರು ಮತ್ತು ಮಹಿಳೆಯರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಹೇಳಿದ್ದಾರೆ.ಬುಧವಾರ ನಗರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಅಡಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ…

Read More

ಬಿಎಲ್ ಡಿಇ ಎಸ್.ಎಸ್.ಎಂ ಔಷಧಿಯ ಮಹಾವಿದ್ಯಾಲಯದಲ್ಲಿ ದೃಷ್ಟಿಕೋನ ಕಂಕಣ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 16: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ ಔಷಧಿಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದಲ್ಲಿ ನೂತನ ವಿದ್ಯಾರ್ಥಿಗಳಿಗಾಗಿ ದೃಷ್ಟಿಕೋನ ಕಾರ್ಯಕ್ರಮ ಕಂಕಣ- 2025 ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿಯ ಐ.ಸಿ.ಎಂ.ಆರ್ ಎನ್.ಐ.ಟಿ.ಎಂನ ಡಾ. ಬನಪ್ಪ ಉಂಗೆರ ಮಾತನಾಡಿ, ಫಾರ್ಮಾ ಪದವೀಧರರಿಗೆ ಭವಿಷ್ಯದಲ್ಲಿ ಹೊಸ ಔಷಧ ಅನ್ವೇಷಣೆ ಮತ್ತು ಸೂತ್ರೀಕರಣ ವಿನ್ಯಾಸ ಹಾಗೂ ಕ್ಲಿನಿಕಲ್ ಸಂಶೋಧನೆಯಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಬಿ. ಫಾರ್ಮ್ಸ್ ಸಂಯೋಜಕ ಡಾ. ಶ್ರೀಧರಕುಮಾರ ಬಿರಾದಾರ ಮತ್ತು…

Read More

ಕ್ಯಾಂಪಸ್ ಸಂದರ್ಶನ: 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಯ್ಕೆ.

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 13: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್.‌ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವ್ಯವಹಾರ ಅಧ್ಯಯನ ಮತ್ತು ಸಂಶೋಧನೆ ಕೇಂದ್ರ, ಎಂ.ಬಿ.ಎ. ವಿಭಾಗದಲ್ಲಿ ನಾನಾ ಕಾರ್ಪೋರೇಟ್‌ ಕಂಪನಿಗಳು ನಡೆಸಿದ ಕ್ಯಾಂಪಸ್‌ ಸಂದರ್ಶನದಲ್ಲಿ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.ಕುಮಾರ ಅಭಿಷೇಕ ಬಿಲ್ಲದ, ಕಾವ್ಯಾ ಹಿರೇಮಠ ಅವರು ಪುಣೆಯ ಡಿಸೈನ್‌ ಕರ್ವ ಟೆಕ್ನಾಲಜಿ ಕಂಪನಿಗೆ ಆಯ್ಕೆಯಾದರೆ, ನಿವೇದಿತಾ ತೊಂಡಿಹಾಳ, ಸಚೀನ ಪಟ್ಟಣಶೆಟ್ಟಿ, ಬಸವರಾಜ ದಡ್ಡಿಮನಿ, ಅರುಣ ಮೊಪಗಾರ ಅವರು ಜಿಕ್ಸಿಸ್‌…

Read More

ರಿಯಾಯಿತಿ ದರದಲ್ಲಿ ಆರೋಗ್ಯ ಚಿಕಿತ್ಸೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 9: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ನಾಳೆ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 17ರ ವರೆಗೆ ಆರು ದಿನಗಳ ಕಾಲ ಪುರುಷರಲ್ಲಿ ಸಂತಾನ ಹೀನತೆ ಮತ್ತು ಪುರುಷರ ವೀರ್ಯದಲ್ಲಿನ ಸಮಸ್ಯೆಗೆ ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರ ನಡೆಯಲಿದೆ.ಈ ಸಮಸ್ಯೆ ಎದುರಿಸುತ್ತಿರುವ ಪುರುಷರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8073518596 ಕ್ಕೆ ಸಂಪರ್ಕಿಸಬಹುದಾಗಿದೆ, ಎಂದು ಕಾಲೇಜಿನ ಪ್ರಾಚಾರ್ಯ…

Read More

ಶಸ್ತ್ರ ಚಿಕಿತ್ಸೆಗೆ ಆರೋಗ್ಯ ವಿಮೆ ಸೌಲಭ್ಯ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಇ.ಸಿ.ಎಚ್ಎಸ್(Ex- Servicemen Contributory Health Scheme) ಮತ್ತು ಇ.ಎಸ್.ಐ.ಸಿ(Employees State Insurance Corporation) ವಿಮೆ ಅಡಿಯಲ್ಲಿ ನಗದು ರಹಿತವಾಗಿ ನಾನಾ ಕಾಯಿಲೆಗಳಿಗೆ ಸೂಪರ್ ಸ್ಪೇಷಾಲಿಟಿ ಚಿಕಿತ್ಸೆ ಸೌಲಭ್ಯ ಪ್ರಾರಂಭವಾಗಿದೆ.ಸೂಪರ್ ಸ್ಪೇಷಾಲಿಟಿ ಚಿಕಿತ್ಸೆಗಳಾದ ಹೃದಯ ರೋಗ, ನರರೋಗ, ಮೂತ್ರಪಿಂಡ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ, ಮೊಳಕಾಲು ಮಂಡಿ, ಸೋಂಟದ ಕೀಲು ಶಸ್ತ್ರಚಿಕಿತ್ಸೆ, ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಮೇಲಿನ ಎರಡು…

Read More

ಎಂಬಿಬಿಎಸ್ ಕೋರ್ಸಿಗೆ ಹೆಚ್ಚುವರಿ 50 ಸೀಟು ಮಂಜೂರು

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 5: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಂ.ಬಿ.ಬಿ.ಎಸ್ ಕೋರ್ಸಿಗೆ 50 ಹೆಚ್ಚುವರಿ ಸೀಟುಗಳು ಮಂಜೂರಾಗಿವೆ. ಇದರಿಂದಾಗಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನಲ್ಲಿ ಈ ಬಾರಿ ಒಟ್ಟು 250 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಸಿಗಲಿದೆ.ಕಾಲೇಜು ಈ ವರ್ಷದ ಜನೇವರಿಯಲ್ಲಿ ಹೆಚ್ಚುವರಿ ಸೀಟು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಅದರಂತೆ ಜೂನ್ 2025ರಲ್ಲಿ ನ್ಯಾಶನಲ್…

Read More

ಸೆ. 8ರಿಂದ 13ರ ವರೆಗೆ ಉಚಿತ ಆರೋಗ್ಯ ಶಿಬಿರ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 4: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಲ್ಯತಂತ್ರ ವಿಭಾಗದ ವತಿಯಿಂದ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 13ರ ವರೆಗೆ ಆರು ದಿನಗಳ ಕಾಲ ಉರುಪು ಮೂಲವ್ಯಾಧಿ ಮತ್ತು ಸೊಂಟ ನೋವು(ಸಿಯಾಟಿಕಾ) ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ.ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7019656245 ಮತ್ತು‌ 8147740460ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ…

Read More

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಕ್ರೀಡಾ ಸಾಧನೆ ಎಲ್ಲರಿಗೂ ಸ್ಪೂರ್ತಿ:ಕೋರಿ

ಸಪ್ತಸಾಗರ ವಾರ್ತೆ ವಿಜಯಪುರ, ಆ. 29: ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಕ್ರೀಡಾ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಕ್ರೀಡಾ ವಿಭಾಗದ ನಿರ್ದೇಶಕ ಎಸ್.ಎಸ್. ಕೋರಿ ಹೇಳಿದ್ದಾರೆ.ಶುಕ್ರವಾರ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಪಬ್ಲಿಕ್ ಸಿ.ಬಿ.ಎಸ್.ಇ ಶಾಲೆಯ ವತಿಯಿಂದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಧುಮೇಹ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕ್ರೀಡೆ ಮತ್ತು ಆರೋಗ್ಯ ಒಂದಕ್ಕೊಂದು ಪೂರಕವಾಗಿವೆ….

Read More

ಆ. 29ರಂದು ಮಧುಮೇಹ ಜಾಗೃತಿ ಜಾಥಾ

ಸಪ್ತಸಾಗರ ವಾರ್ತೆ ವಿಜಯಪುರ, ಆ. 26: ನಗರದ ಪ್ರತಿಷ್ಠಿತ ಬಿ.ಎಲ್.ಡಿ.‌ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಶಾಲೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆ. 29 ರಂದು ಶುಕ್ರವಾರ ಮಧುಮೇಹ ಜಾಗೃತಿ ಜಾಥಾ ನಡೆಯಲಿದೆ.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಈ ಜಾಗೃತಿ ಜಾಥಾ ನಡೆಯಲಿದೆ. ಸಕ್ಕರೆ ಕಾಯಿಲೆ ಹಲವು ರೋಗಗಳ ತವರಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಅನೇಕ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅವರೆಲ್ಲರಲ್ಲಿ ಆರೋಗ್ಯದ ಜಾಗೃತಿಯನ್ನು ಉಂಟು ಮಾಡಲು ಈ…

Read More