ವಿಜಯಪುರ- ಚಿಕ್ಕಲಕಿ ಬಸ್ ಗೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 16: ನಗರದಿಂದ ಚಿಕ್ಕಲಕಿ ಕ್ರಾಸ್ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್ ಸಂಚಾರಕ್ಕೆ ಇಂದು ಮಂಗಳವಾರ ಯಕ್ಕುಂಡಿ‌ ಗ್ರಾಮದಲ್ಲಿ ಚಾಲನೆ ನೀಡಲಾಯಿತು.ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಗರಿಸಲಾಗಿದ್ದ ಎರಡು ಬಸ್ಸುಗಳ ಸಂಚಾರಕ್ಕೆ ತಾಲೂಕು ಗ್ಯಾರಂಟಿ ಯೋಜನೆಗಳ‌ ಸಮಿತಿ‌ ಅಧ್ಯಕ್ಷ ಮಲ್ಲು ದಳವಾಯಿ ಮತ್ತು ಬ್ಲಾಕ್ ಕಾಂಗ್ರೆಸ್ ಈರಗೊಂಡ ಬಿರಾದಾರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲು ದಳವಾಯಿ, ಸಚಿವ ಎಂ. ಬಿ. ಪಾಟೀಲ‌ ಅವರ…

Read More

ನಾಳೆಯಿಂದ ವಿಜಯಪುರ-‌ಚಿಕ್ಕಲಕಿ ಕ್ರಾಸ್ ಮಾರ್ಗದಲ್ಲಿ ಎರಡು ಬಸ್ ಕಾರ್ಯಾರಂಭ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 15: ನಾಳೆ ಮಂಗಳವಾರದಿಂದ ವಿಜಯಪುರ ನಗರದಿಂದ-‌ಚಿಕ್ಕಲಕಿ ಕ್ರಾಸ್ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಎರಡು ಗ್ರಾಮೀಣ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಿದೆ.ವಿದ್ಯಾರ್ಥಿಗಳು, ರೈತರು‌ ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು‌ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಸ್ ಸೇವೆ ಪ್ರಾರಂಭಿಸಲಾಗುತ್ತಿದೆ.ಪ್ರತಿ‌ದಿನ‌ ಎರಡು ಬಸ್ಸುಗಳು ವಿಜಯಪುರದಿಂದ ಖತಿಜಾಪುರ,…

Read More

ಸಾರವಾಡ ಗ್ರಾಮಕ್ಕೆ ನೂತನ ಎರಡು ಬಸ್ಸುಗಳ ಕಾರ್ಯಾರಂಭ

ಸಪ್ತಸಾಗರ ವಾರ್ತೆ ವಿಜಯಪುರ, ಆ. 27: ಬಬಲೇಶ್ವರ- ವಿಜಯಪುರ ಮತ್ತು ವಿಜಯಪುರ- ಬಬಲೇಶ್ವರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಮಂಗಳವಾರದಿಂದ ಪ್ರಾರಂಭವಾಗಿದೆ.ಸಾರವಾಡ ಗ್ರಾಮಸ್ಥರ ಬೇಡಿಕೆ ಹಿನ್ನೆಲೆಯಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೀ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಈ ಬಸ್ ಸೇವೆ ಪ್ರಾರಂಭಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ‌ ಈ ಬಸ್ ಸೇವೆ ಪ್ರಾರಂಭಿಸಿದೆ.ಮಂಗಳವಾರ ಬಬಲೇಶ್ವರ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಳೆ…

Read More

ಸಾರವಾಡಕ್ಕೆ ಎಲ್ಲ ಬಸ್‌ಗಳ ನಿಲುಗಡೆಗೆ ಕ್ರಮ: ಗ್ರಾಮಸ್ಥರಿಂದ ಹರ್ಷ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 25 : ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ, ವಾಯವ್ಯ ಕರ್ನಾಟಕ ಸಾರಿಗೆ ಬಸ್‌ಗಳ ನಿಲುಗಡೆಗೆ ಆಗ್ರಹಿಸಿ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಲು ಕಳೆದ ಆಗಸ್ಟ್ 14 ರಂದು ಗ್ರಾಮಸ್ಥರು ಮೂರು ಗಂಟೆಗಳ ಕಾಲ ಸಾರವಾಡ ಗ್ರಾಮದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಸ್‌ ನಿಲುಗಡೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. ಭರವಸೆ ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಗಷ್ಟೇ 26…

Read More

ನಾಳೆ ವಿಜಯಪುರ- ಬಬಲೇಶ್ವರ ಎರಡು ಬಸ್ಸುಗಳ ಸೇವೆ ಆರಂಭ

ಸಪ್ತಸಾಗರ ವಾರ್ತೆ ವಿಜಯಪುರ, ಆ. 25: ನಾಳೆ ಮಂಗಳವಾರದಿಂದ ವಿಜಯಪುರ- ಬಬಲೇಶ್ವರ ಮತ್ತು ಬಬಲೇಶ್ವರ- ವಿಜಯಪುರ ಮಧ್ಯೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭವಾಗಲಿದೆ.ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಸೂಚನೆ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರತಿದಿನ‌ ಸಾರಿಗೆ ಎರಡು ಬಸ್ಸುಗಳನ್ನು ಈ ಮಾರ್ಗದಲ್ಲಿ ಓಡಿಸಲಿದೆ. ಒಂದು ಬಸ್ಸು ವಿಜಯಪುರ- ಖತಿಜಾಪುರ- ಸಾರವಾಡ ಮಾರ್ಗವಾಗಿ ಬಬಲೇಶ್ವರಕ್ಕೆ ಸಂಚರಿಸಿದರೆ ಮತ್ತೊಂದು ಬಸ್ಸು ಬಬಲೇಶ್ವರ- ಸಾರವಾಡ-…

Read More

ಸಾರವಾಡ ಗ್ರಾಮಕ್ಕೆ ಕಡ್ಡಾಯವಾಗಿ ಬಸ್ ನಿಲುಗಡೆಗೆ ಆದೇಶ

ಸಪ್ತ ಸಾಗರ ವಾರ್ತೆ ವಿಜಯಪುರ, ಆ. 24:ವಿಜಯಪುರ-ಬಬಲೇಶ್ವರ ಮಾರ್ಗದಲ್ಲಿ ಬರುವ ಸಾರವಾಡ ಗ್ರಾಮಕ್ಕೆ ಸಾಮಾನ್ಯ, ವೇಗದೂತ ಸಾರಿಗೆಗಳನ್ನು ಕಡ್ಡಾಯವಾಗಿ ನಿಲುಗಡೆ ನೀಡಿ ಕಾರ್ಯಾಚರಣೆ ಮಾಡುವ ಕುರಿತು ಮೇಲಾಧಿಕಾರಿಗಳು ಆದೇಶ ನೀಡಿದ್ದಾರೆ .ಸಾರವಾಡ ಗ್ರಾಮ ಪಂಚಾಯತಿ ಅಧ್ಯಕ್ಷರ ಮನವಿ ಪತ್ರದ ಮೂಲಕ ಸಾರವಾಡ ಗ್ರಾಮಕ್ಕೆ ಸಾಮಾನ್ಯ ಹಾಗೂ ವೇಗದೂತ ಬಸ್ ಗಳ ನಿಲುಗಡೆ ಮಾಡುವಂತೆ ಮೇಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಈಗಾಗಲೇ ಈ ಬಗ್ಗೆ ಮೇಲಾಧಿಕಾರಿಗಳು ಆದೇಶ ನೀಡಿದ್ದರೂ ಚಾಲಕರು ಹಾಗೂ ನಿರ್ವಾಹಕರು ಸಾರವಾಡ ಗ್ರಾಮಕ್ಕೆ ಬಸ್ ನಿಲುಗಡೆ ಮಾಡದೆ…

Read More

ಬಸ್ ಪಲ್ಟಿ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 4: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಹಲವರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಮನ್ನಾಪುರ ಬಳಿ ಸೋಮವಾರ ಸಂಭವಿಸಿದೆ.ಸಿಂದಗಿಯಿಂದ ಹೊನ್ನಳ್ಳಿಗೆ ತೆರಳುತ್ತಿದ್ದ ಬಸ್ ಹದಗೆಟ್ಟ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣ ಹಾನಿಯಾಗಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಯಾಳುಗಳನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸಿಂದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More