
ಏಕರೂಪ ಮಾಸಾಶನ ಪದ್ಧತಿ ಜಾರಿಗೆ ಆಗ್ರಹಿಸಿ ಹಿರಿಯ ಪತ್ರಕರ್ತರ ಸಮಾವೇಶ ಕೇಂದ್ರ ಸರ್ಕಾರಕ್ಕೆ ಒತ್ತಾಯ
ಸಪ್ತಸಾಗರ ವಾರ್ತೆ ತಿರುವನಂತಪುರಂ, ಆ. 29:ದೇಶದ ಎಲ್ಲಾ ರಾಜ್ಯಗಳ ಹಿರಿಯ ನಿವೃತ್ತ ಪತ್ರಕರ್ತರಿಗೆ ಏಕರೂಪದ ಮಾಸಾಶನ ಪದ್ಧತಿಯನ್ನು ರೂಪಿಸಬೇಕೆಂದು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಹಿರಿಯ ಪತ್ರಕರ್ತರ ಒಕ್ಕೂಟವು ಸಮ್ಮೇಳನದಲ್ಲಿ ಒತ್ತಾಯಿಸಿತು.ಆಗಸ್ಟ್ 19, 20 ಹಾಗೂ 21ರಂದು ಕೇರಳ ರಾಜಧಾನಿ ತಿರುವನಂತನಪುರಂ ವಿ ಪ್ರತಾಪ ಚಂದ್ರನ್ ನಗರದಲ್ಲಿ ನಡೆದ ಹಿರಿಯ ಪತ್ರಕರ್ತರ ಪ್ರಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಒಕ್ಕೊರಲಿನ ನಿರ್ಣಯ ಅಂಗೀಕರಿಸಲಾಯಿತು.ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪೀಣರಾಯಿ ವಿಜಯನ್, ಅತಿ ಹೆಚ್ಚು ಹಿರಿಯ ಪತ್ರಕರ್ತರಿಗೆ ಮಾಶಾಸನ ನೀಡುತ್ತಿರುವ ರಾಜ್ಯ…