ನಾಗಠಾಣದಲ್ಲಿ ರಾಷ್ಟ್ರೀಯ ಮಗಳ ದಿನ ಆಚರಿಸಿದ ಚಿಣ್ಣರು
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 27:ರಾಷ್ಟ್ರೀಯ ಮಗಳ ದಿನದ ಅಂಗವಾಗಿ ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಚಿಣ್ಣರಾದ ಅನುಶ್ರೀ, ಆರುಷಿ ಹಾಗೂ ಶ್ರೀನಿಧಿ ಅವರು ಪುಷ್ಪ ಪ್ರದರ್ಶಿಸುವ ಮೂಲಕ ವಿಶೇಷವಾಗಿ ಆಚರಿಸಿದರು.ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ರಾಷ್ಟ್ರೀಯ ಮಗಳ ದಿನ ಆಚರಿಸಲಾಗುತ್ತದೆ. ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣುಮಕ್ಕಳ ಮಹತ್ವ, ಗೌರವ ಮತ್ತು ಪ್ರೀತಿಯನ್ನು ಸಾರುವುದು ಈ ದಿನದ ಉದ್ದೇಶವಾಗಿದೆ.ಹೆಣ್ಣುಮಕ್ಕಳು ಶಿಕ್ಷಣ, ಕ್ರೀಡೆ, ಬಾಹ್ಯಾಕಾಶ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅವರ…


