ರಾಜಕಾಲುವೆ ಒತ್ತುವರಿ ತೆರವುಗೊಳಿಸಿ:ಮಹಾಬರಿ
ಸಪ್ತಸಾಗರ ವಾರ್ತೆ, ವಿಜಯಪುರ, ಅ. 9 : ಮಳೆ ನೀರು ಬಂದಾಗ ಅನೇಕ ಬಡಾವಣೆಗಳು ಅಕ್ಷರಶ: ನಡುಗಡ್ಡೆಯಾಗುತ್ತವೆ. ಈ ಎಲ್ಲ ಸಮಸ್ಯೆಗಳಿಗೆ ರಾಜಕಾಲುವೆಗಳ ವ್ಯವಸ್ಥೆ ಪುನರುಜ್ಜೀವನಗೊಳಿಸುವುದೇ ಪರಿಹಾರವಾಗಿದೆ. ಆದಿಲ್‌ಶಾಹಿ ಕಾಲದಲ್ಲಿ ಈಗಿರುವ ಜನಸಂಖ್ಯೆಗಿಂತ ೧೦ ಪಟ್ಟು ಹೆಚ್ಚು ಜನಸಂಖ್ಯೆ ಇತ್ತು. ಅರಸು ನೀರಿನ ಸಮರ್ಥ ಸದ್ಭಳಕೆಯ ಜೊತೆಗೆ ಮಳೆ ನೀರು ಹರಿದು ಹೋಗಲು, ಚರಂಡಿ ನೀರು ಹರಿದು ಹೋಗಲು ರಾಜಕಾಲುವೆ ನಿರ್ಮಿಸಿದ್ದರು. ಈ ವ್ಯವಸ್ಥೆ ಈಗಲೂ ಇದೆ. ಆದರೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ನಗರದ ನೀರು ಹೊರ ಹೋಗದೇ…


