ಬರ ನೆರವು ಸಂಬಂಧ ಸರ್ವಪಕ್ಷ ನಿಯೋಗದ ಜತೆ ದೆಹಲಿಗೆ ಬಾರದಿದ್ದರೆ ಬಿಜೆಪಿಯ ಕಪಟ ನಾಟಕ ಸಾಬೀತು: ಸಿಎಂ ಡಿ ಕೆ ಶಿವಕುಮಾರ್
ಸಪ್ತಸಾಗರ ವಾರ್ತೆ,ಬೆಂಗಳೂರು, ಸೆ. 28: “ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗದೊಂದಿಗೆ ಬಾರದಿದ್ದರೆ, ಬಿಜೆಪಿಯವರದ್ದು ಕಪಟ ನಾಟಕ ಎಂಬುದು ಸಾಬೀತಾಗುತ್ತದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡದಿದ್ದರೆ, ರೈತರ ಹಿತಕ್ಕಾಗಿ ನಾವೇ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.ಬರ ವಿಚಾರದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಹೋಗುವುದಿಲ್ಲ ಎಂಬ ಬಿಜೆಪಿ…


