ವಿಜಯಪುರದಲ್ಲಿ ಹೋಳಿ ರಂಗಿನಾಟದಲ್ಲಿ ಮಿಂದೆದ್ದ ಜನ
ಸಪ್ತಸಾಗರ ವಾರ್ತೆ ವಿಜಯಪುರ, ಮಾ. 4 :ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಎತ್ತ ನೋಡಿದರೂ ಬಣ್ಣದಾಟದ ಸಡಗರ….ಕೆಂಪು, ಹಳದಿ, ಕೇಸರಿ ಹೀಗೆ ನಾನಾ ಬಣ್ಣಗಳನ್ನು ಬಳಿದುಕೊಂಡು, ಇತರರಿಗೂ ಉತ್ಸಾಹದಿಂದ ಎರಚಲು ಮುಂದಾದ ಯುವಕರ ಗುಂಪು…ಅಲ್ಲಲ್ಲಿ ಹೋಲಿ ಇವೆಂಟ್‌ಗಳಲ್ಲಿ ಯುವಕರ ಅಮಿತೋತ್ಸಾಹದ ಬಣ್ಣದಾಟ, ಕುಣಿದಾಟ, ಬೈಕ್ ಮೇಲೆ ಯುವಕರ ಹರ್ಷೋದ್ಘಾರದ ಸಂಚಾರ…ಹೋಳಿ ಹುಣ್ಣಿಮೆ ಅಂಗವಾಗಿ ಬುಧವಾರ ವಿಜಯಪುರದಲ್ಲಿ ಕಂಡು ಬಂದ ದೃಶ್ಯಗಳಿವು.ಬೆಳಿಗ್ಗೆಯಿಂದಲೇ ವಿಜಯಪುರ ರಂಗಿನಾಟದಲ್ಲಿ ಮಿಂದೆದಿತ್ತು. ಸೂರ್ಯನ ಪ್ರಖರವಾದ ಬಿಸಿಲು ಬಣ್ಣದಾಟಕ್ಕೆ ಬ್ರೇಕ್ ಬೀಳಲಿಲ್ಲ. ಮಧ್ಯಾಹ್ನವಾದರೂ ಬಣ್ಣದಾಟದ ಉತ್ಸಾಹಕ್ಕೆ ಮಾತ್ರ…


