ಸಹಕಾರಿ ಬ್ಯಾಂಕುಗಳು ರೈತರ ಪಾಲಿಗೆ ವರದಾನ:ಶಿವಾನಂದ ಪಾಟೀಲ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 16:ಸಹಕಾರಿ ಬ್ಯಾಂಕುಗಳು ರೈತರ ಪಾಲಿಗೆ ವರದಾನವಾಗಿವೆ ಎಂದು ಮಾಜಿ ಸಚಿವ, ಬಸವನ ಬಾಗೇವಾಡಿ ಶಾಸಕ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಬಡವರಿಗೆ ಸಾಲ ಸಿಗುವುದು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಮಾತ್ರ. ಸಣ್ಣ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡಲ್ಲ. ಕಷ್ಟದಲ್ಲಿದ್ದಾಗಲೂ ಸಹಕಾರಿ ಸಂಘಗಳ ಸಾಲ ಮನ್ನಾ ಆಗಿ ಅದೆಷ್ಟೋ…


