
ಶಿಕ್ಷಕರ ದಿನಾಚರಣೆ-ಚಿಂತನಗೋಷ್ಠಿಶಿಕ್ಷಕ ಮನುಷ್ಯನ ಸೃಷ್ಟಿಕರ್ತ-ಬಸವರಾಜ ಹಂಚಲಿ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 6: ಶಿಕ್ಷಕ ಮನುಷ್ಯನ ಸೃಷ್ಟಿಕರ್ತ. ಅವನು ಮಾನವಕುಲ, ವರ್ತಮಾನ ಮತ್ತು ಭವಿಷ್ಯದ ಸಂಪೂರ್ಣ ನಾಗರಿಕತೆಯ ಅಡಿಪಾಯ. ಶಿಕ್ಷಕರ ಸಕ್ರಿಯ ಸಹಕಾರದಿಂದ ರಾಷ್ಟ್ರದ ಪುನರ್ನಿರ್ಮಾಣ ಸಾಧ್ಯ ಎಂದು ಮಡಿಕೇಶ್ವರದ ಸರಕಾರಿ ಪ್ರೌಢ ಶಾಲೆಯ ಇಂಗ್ಲೀಷ್ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ “ಶಿಕ್ಷಕರು ರಾಷ್ಟ್ರ ನಿರ್ಮಾಪಕರು”-ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಮೌಲ್ಯ, ಮತ್ತು…