ಬ್ಲ್ಯಾಕ್ ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ: ಯತ್ನಾಳ ಹೇಳಿಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 17:ಬ್ಲ್ಯಾಕ್ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ. ಬ್ಲ್ಯಾಕ್ಮೇಲ್ ಮಾಡಿದ್ದರೆ ಎಂದೋ ಸಚಿವನಾಗಿರುತ್ತಿದ್ದೆ.ಮಾಜಿ ಸಿಎಂ ಯಡಿಯೂರಪ್ಪನವರ ಸಾಕಷ್ಟು ಭ್ರಷ್ಟಾಚಾರ ನನ್ನ ಬಳಿ ಇದ್ದವು.ಪಕ್ಷದ ಹಿತ ದೃಷ್ಟಿಯಿಂದ ಬ್ಲಾಕ್ಮೇಲ್ ಮಾಡಲಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವ ಎಂ.ಬಿ. ಪಾಟೀಲರಿಗೆ ಟಾಂಗ್ ನೀಡಿದರು.ಟಿಕೆಟ್ ಗಾಗಿ ಯತ್ನಾಳ ಬಿಜೆಪಿಗೆ ಬ್ಲ್ಯಾಕಮೇಲ್ ಮಾಡುತ್ತಿದ್ದಾರೆ ಎಂಬ ಸಚಿವ ಎಂ. ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಯತ್ನಾಳ ಸುದ್ದಿಗಾರರ ಜೊತೆಗೆ ಮಾತನಾಡಿದರು.ಯಡ್ಡಿ ಕುರಿತು ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನಿಸಿದೆ….

Read More

ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು: ಕುಶಾಲ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 10 :ಪುಸ್ತಕಗಳಿಂದ ಮನೆ ಶೃಂಗಾರಗೊಂಡರೆˌ ಮಕ್ಕಳ ಮನಸ್ಸು ಜ್ಞಾನದಿಂದ ಶೃಂಗಾರವಾಗುತ್ತದೆ ಎಂದು ಕನ್ನಡ ಪುಸ್ತಕಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಡಾ. ಕುಶಾಲ ಬರಗೂರ ಹೇಳಿದರು.ನಗರದ ಸ್ವಾತಂತ್ರ‍್ಯಯೋಧರ ಕಾಲನಿಯ ಸಾಹಿತಿ ಸಂಗಮೇಶ ಬದಾಮಿ ಅವರನಿವಾಸದಲ್ಲಿ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.ದೇವರ ಮನೆಯಲ್ಲಿ ದೇವರು ಕಾಣುವ ಹಾಗೆ ಮನೆ ಪ್ರವೇಶಿಸಿದೊಡನೆ ಗ್ರಂಥಗಳು ಕಾಣಬೇಕು. ಅಂದಾಗ ಓದುವ ಸಂಸ್ಕೃತಿ ಬೆಳೆಯುತ್ತದೆ. ಮೊಬೈಲ್ ಗೀಳುಕಡಿಮೆಯಾಗಿˌ ಓದುವ ಆಸಕ್ತಿ ಹೆಚ್ಚುತ್ತದೆ ಎಂದರು.ಅತಿಥಿ ಶಂಕರ ಬೈಚಬಾಳ…

Read More

ಕನ್ನಡ ಭಾಷೆ ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕ – ವಿಠ್ಠಲ ಕಟಕದೊಂಡ

ಸಪ್ತಸಾಗರ ವಾರ್ತೆ, ವಿಜಯಪುರ, ಜ.21: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ಮೊಟ್ಟಮೊದಲ ಶಾಸನದಿಂದ ಹಿಡಿದು ಇಂದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಅಷ್ಟ ದಿಗ್ಗಜರು ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡದ ಅಭಿಮಾನ ಮೂಡಿಸಿದ ಪಾವನ ಪುಣ್ಯಭೂಮಿ ನಮ್ಮದು. ಕನ್ನಡ ನಮ್ಮ ತಾಯಿಭಾಷೆ, ಮಾತೃಭಾಷೆ, ನುಡಿ ಭಾಷೆಯಾಗಿ ನಾವೆಲ್ಲರೂ ಕನ್ನಡ ಭಾಷೆಯನ್ನು ಅಭಿಮಾನದಿಂದ ಪ್ರೀತಿಸಿ ಆರಾಧಿಸೋಣ. ಕನ್ನಡ ಭಾಷೆ ನಮ್ಮೆಲ್ಲರ ಸಂಸ್ಕೃತಿ ಸಂಸ್ಕಾರದ ಪ್ರತೀಕ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ…

Read More

ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಮೂಲಾಧಾರ- ಡಾ. ಬನುದೇವಿ ಸಂಕಣ್ಣವರ

ಸಪ್ತ ಸಾಗರ ವಾರ್ತೆ, ವಿಜಯಪುರ,ಡಿ.8: ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದ್ದು, ದೇಶದ ಘನತೆ ಸಂಸ್ಕೃತ ಮತ್ತು ಸಂಸ್ಕೃತಿ ಎಂಬ ಎರಡು ಅಸ್ತಿವಾರಗಳಲ್ಲಿ ನಿಂತಿದೆ ಎಂದು ವಿಶ್ರಾಂತ ಉಪನ್ಯಾಸಕಿ ಡಾ. ಬನುದೇವಿ ಸಂಕಣ್ಣವರ ಹೇಳಿದರು.ನಗರದ ಪಿಡಿಜೆ ಹೈಸ್ಕೂಲಿನಲ್ಲಿ ಬೆಂಗಳೂರಿನ ಅಗರಖೇಡ ಪ್ರತಿಷ್ಠಾನ ಮತ್ತು ಇಲ್ಲಿಯ ವಿಜಯಪುರ ಸಂಸ್ಕೃತ ಬಳಗದ ಸಂಯುಕ್ತ ಆಶ್ರಯದಲ್ಲಿ ‘ಸಂಸ್ಕೃತ ಸುಭಾಷಿತ ಸ್ಪರ್ಧೆ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಸಂಸ್ಕೃತವು ಅತ್ಯಂತ ವೈಜ್ಞಾನಿಕ ಭಾಷೆಯಾಗಿದ್ದು, ನಾಸಾ ಸಂಶೋಧನೆಗಳಲ್ಲಿ ಸಂಸ್ಕೃತದ ಉಪಯೋಗದ ಸಾಧ್ಯತೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ….

Read More

ರಾಷ್ಟ್ರಧ್ವಜವು ದೇಶದ ವೈವಿಧ್ಯಮಯ ಸಂಸ್ಕೃತಿಯ ಪ್ರತೀಕ -ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ,ವಿಜಯಪುರ, ಆ. 16: ರಾಷ್ಟ್ರಧ್ವಜವು ನಮ್ಮ ದೇಶದ ಗೌರವದ ಸಂಕೇತವಾಗಿದೆ. ಇದು ನಮ್ಮ ದೇಶದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ,ದೇಶದ ಪ್ರಗತಿ ಮತ್ತು ಏಕತೆಯನ್ನು ಪ್ರತಿನಿಧಿಸುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ‘ರಾಷ್ಟ್ರಧ್ವಜದ ಮಹತ್ವ’ ಕುರಿತ ಚಿಂತನಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.ರಾಷ್ಟ್ರಧ್ವಜವು ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯ-ತ್ಯಾಗಗಳನ್ನು ಎತ್ತಿಹಿಡಿಯುತ್ತದೆ. ಅದು ದೇಶದ ಇತಿಹಾಸ, ಸಂಸ್ಕೃತಿ, ಮತ್ತು ಜನರ ಭಾವನೆಗಳನ್ನು ಪ್ರತಿನಿಧಿಸುತ್ತದೆ…

Read More

ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ : ಸಂಗಮೇಶ ಬಬಲೇಶ್ವರ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 30: ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಕಿವಿಮಾತು ಹೇಳಿದರು.ಕೊಲ್ಹಾರ ಪಟ್ಟಣದ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಕಲ್ಪಿಸಲಾಗಿರುವ ಅಗತ್ಯ ಮೂಲಭೂತ ಸೌಲಭ್ಯಗಳು ಸೇರಿದಂತೆ ವಸತಿ ಶಾಲೆಯಲ್ಲಿನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದ ಅವರು, ಮಕ್ಕಳಿಗೆ ಸ್ವತ: ತಾವೇ ಊಟ ಬಡಿಸಿ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ನಂತರ, ಮಕ್ಕಳೊಂದಿಗೆ…

Read More