ಅಕ್ರಮವಾಗಿ ಗೃಹ ಬಳಕೆ ಸಿಲಿಂಡರ್ ಮಾರಾಟ : ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 6: ವಿಜಯಪುರ ನಗರದ ಹುಡ್ಕೋ ಹಾಗೂ ರಾಘವೇಂದ್ರ ಕಾಲೋನಿ ಹತ್ತಿರದಲ್ಲಿ ಗೃಹ ಬಳಕೆ ಸಿಲಿಂಡರ್ ಗಳನ್ನು ಬಳಸಿ ಅಕ್ರಮವಾಗಿ ಆಟೋಗಳಿಗೆ ತುಂಬಿಸುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ನಾಲ್ಕು ಗೃಹ ಬಳಕೆ ಸಿಲಿಂಡರ್ ಹಾಗೂ ತೂಕ ಮಾಡುವ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.ದಾಳಿಯಲ್ಲಿ ಆಹಾರ ಇಲಾಖೆ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಜಲನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಮಹೇಶ ಸಂಖ, ಪೋಲಿಸ ಸಿಬ್ಬಂದಿಗಳಾದ ವಿ.ಎಂ.ಪವಾರ, ಪಿ.ಆರ್.ರಾಠೋಡ, ಎಸ್.ವಾಯ್.ನಾಟಿಕಾರ, ಎಚ್.ಎನ್.ಪೂಜಾರಿ, ಎನ್.ಬಿ.ಚವ್ಹಾಣ,…

Read More

ಗೃಹ ಬಳಕೆ ಸಿಲಿಂಡರ್ ಅನಧಿಕೃತ ರಿಫಿಲಿಂಗ್ : ಆಹಾರ ಇಲಾಖೆ ದಾಳಿ, ಸಿಲಿಂಡರ್ ವಶಕ್ಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.8: ಗೃಹ ಬಳಕೆಯ ಸಿಲಿಂಡರ್ ಗಳಿಂದ ಅನಧಿಕೃತವಾಗಿ ರಿಫಿಲಿಂಗ್ ಮಾಡುತ್ತಿರುವ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 31920 ರೂ. ಮೌಲ್ಯದ ಒಟ್ಟು 10 ಹೆಚ್‍ಪಿ ಕಂಪನಿ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.ವಿಜಯಪುರ ನಗರದ ಇಬ್ರಾಹಿಂ ರೋಜಾ ಹತ್ತಿರದಲ್ಲಿ ಪತ್ರಾಸ ಶೆಡ್‍ನಲ್ಲಿ ಹಾಗೂ ನಗರದ ಬಾಗಲಕೋಟೆ ಕ್ರಾಸ್ ಹತ್ತಿರದ ಒಂದು ಪತ್ರಾಸ್ ಶೆಡ್‍ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಸಂಗ್ರಹಣೆ ಮಾಡಿ ರಿಫಿಲಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಸಿಲಿಂಡರ್…

Read More

ಅಕ್ರಮ ಸಿಲಿಂಡರ್ ಅಡ್ಡೆ ಮೇಲೆ ದಾಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 27:ನಗರದ ಅತಾವುಲ್ಲಾ ಚೌಕ್ ಹತ್ತಿರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಗಳಿಂದ ಆಟೋಗಳಿಗೆ ರೀಪಿಲ್ ಮಾಡುತ್ತಿರುವ ಸ್ಥಳದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಅಕ್ರಮ ಸಿಲಿಂಡರ್ ಗಳನ್ನು ವಶಪಡಿಸಿಕೊಂಡರು.1 ತುಂಬಿದ ಅಡುಗೆ ಅನಿಲ ಸಿಲಿಂಡರ್ ಹಾಗೂ 3 ಖಾಲಿ ಸಿಲಿಂಡರ್ ಗಳನ್ನು, ಮತ್ತು ರಿಪಿಲ್ ಮಾಡಲು ಬಳಸುತ್ತಿದ್ದ ಮೋಟಾರು ಮತ್ತು ತೂಕದ ಯಂತ್ರವನ್ನು ವಶಪಡಿಸಿಕೊಂಡು ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಆಡುಗೋಡಿಯಲ್ಲಿ ಸಿಲಿಂಡರ್ ಸ್ಪೋಟ: ಓರ್ವ ಬಾಲಕ ಸಾವು, ಹಲವರಿಗೆ ಗಾಯ

ಸಪ್ತಸಾಗರ ವಾರ್ತೆ, ಬೆಂಗಳೂರು, ಆ. 15:ರಾಜ್ಯವೂ ಸೇರಿದಂತೆ ಇಡೀ ದೇಶದ ತುಂಬೆಲ್ಲ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಜನತೆ ಮುಳುಗಿರುವಾಗಲೇ ನಗರದ ಆಡುಗೋಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಓರ್ವ ಬಾಲಕ ಮೃತಪಟ್ಟು ಹಲವರು ಗಾಯಗೊಂಡಿರುವ ದಾರುಣ ದುರಂತ ನಡೆದು ಜನರ ಮನ ಕಲಕುವಂತೆ ಮಾಡಿದೆ.ಮುಬಾರಕ್ (8) ಎಂಬ ಬಾಲಕ ಸಿಲಿಂಡರ್ ಸ್ಫೋಟ ದುರಂತದಲ್ಲಿ ಮೃತಪಟ್ಟಿದ್ದು, ಇತರ 8 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.ಆಡುಗೋಡಿಯ ತಿಮ್ಮರಾಜು ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಆ ಮನೆ ಸಂಪೂರ್ಣ…

Read More