ದಸರಾ: ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡ ಗೆಳೆಯರು
ಸಪ್ತಸಾಗರ ವಾರ್ತೆ, ವಿಜಯಪುರ, ಅ. 2: ದಸರಾ ಹಬ್ಬದ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶಿಕ್ಷಕ ಸಂತೋಷ ಬಂಡೆ, ಸುರೇಶ ಗಿರಿಸಾಗರ, ಶ್ರೀಕಾಂತ ಗುಜ್ಜಲಕರ, ಅಶೋಕ ಪಾತ್ರೋಟ, ಲಕ್ಷ್ಮಣ ಗುಜ್ಜಲವರ, ಅನಿಲ ಗುಜ್ಜಲವರ, ವೆಂಕಟೇಶ ಗುಜ್ಜಲವರ, ಮಹಾಂತೇಶ ಗುಜ್ಜಲವರ ಸೇರಿದಂತೆ ಅನೇಕರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವಿಜಯ ದಶಮಿ ಹಬ್ಬವನ್ನು ಆಚರಿಸಿದರು.


