
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮುಳವಾಡ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ, ಸದಸ್ಯರು
ಸಪ್ತಸಾಗರ ವಾರ್ತೆ, ವಿಜಯಪುರ, ಜು. 15 :ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ಮುಳವಾಡ ಗ್ರಾಮ ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷ ಸೇರಿದಂತೆ 6 ಸದಸ್ಯರು ಬಿಜೆಪಿ ತೊರೆದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ವಿಜಯಪುರ ನಗರದಲ್ಲಿರುವ ಸಚಿವ ಶಿವಾನಂದ ಪಾಟೀಲ ಅವರ ಗೃಹ ಕಛೇರಿಗೆ ಆಗಮಿಸಿದ ಮುಳವಾಡ ಗ್ರಾಮ ಪಂಚಾಯತಿ ಬಿಜೆಪಿ ಸದಸ್ಯರು ಅಧ್ಯಕ್ಷ ಬಾಳು ಚಿನಕೇಕರ, ಉಪಾಧ್ಯಕ್ಷೆ ಮಧುಮತಿ ಧನ್ಯಾಳ, ಗ್ರಾಮ ಪಂಚಾಯತಿ…