ಆಟವಾಡುತ್ತ ಬಾವಿಗೆ ಬಿದ್ದು ಬಾಲಕಿ ಸಾವು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 12: ಬಾಲಕಿಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಂಡಿ ಪಟ್ಟಣ ಹೊರವಲಯದ ಧನಸಿಂಗ್ ತಾಂಡಾದಲ್ಲಿ ನಡೆದಿದೆ.ಅರ್ಚನಾ ರಾಠೋಡ (8) ಮೃತಪಟ್ಟ ಬಾಲಕಿ.ತಾಯಿಯೊಂದಿಗೆ ಕುರಿ ಮೇಯಿಸಲು ಹೋದಾಗ ಆಟವಾಡುತ್ತಾ ಆಕಸ್ಮಿಕವಾಗಿ ಬಾಲಕಿ ಅರ್ಚನಾ ಸೋಮವಾರ ಸಂಜೆ ಬಾವಿಯಲ್ಲಿ ಬಿದ್ದಿದ್ದಳು.ಅಗ್ನಿಶಾಮಕ ದಳದ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಮಂಗಳವಾರ ಬಾಲಕಿ ಶವವನ್ನು ಹೊರ ತೆಗೆದಿದ್ದಾರೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಸಾವು

ಸಪ್ತಸಾಗರ ವಾರ್ತೆ ವಿಜಯಪುರ, ಆ. 7:ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳ ಮಧ್ಯೆ ಕಲಹ ಉಂಟಾಗಿ ಓರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಅಸು ನೀಗಿದ ಘಟನೆ ನಗರ ಹೊರ ವಲಯದ ಯೋಗಾಪುರ ಗ್ರಾಮದಲ್ಲಿ ನಡೆದಿದೆ.ಶ್ರೀ ಸತ್ಯ ಸಾಯಿಬಾಬಾ ಶಾಲೆಯ ವಿದ್ಯಾರ್ಥಿ ಅನ್ಸ್ (11) ಮೃತಪಟ್ಟಿದ್ದಾನೆ. ಬಿಹಾರ ಮೂಲದ ಸುನೀಲ್ ಪುತ್ರ ಅನ್ಸ್5ನೇ ತರಗತಿಯಲ್ಲಿ ಓದುತ್ತಿದ್ದ. ಕೈಯಲ್ಲಿ ಕಟ್ಟುವ ವಾಚ್ ಗಾಗಿ ಬಾಲಕ ಅನ್ಸ್ ಈತನ ಮೇಲೆ 9ನೇ ತರಗತಿ ಬಾಲಕರು ಹಲ್ಲೆ ನಡೆಸಿದ್ದು, ಗಾಯಗೊಂಡಿದ್ದ ಅನ್ಸ್ ಈತನನ್ನು ಅವರ ಪೋಷಕರು…

Read More