ಪ್ರಾರ್ಥನೆ, ಧ್ಯಾನ, ಯೋಗ ದೈವತ್ವದ ಸಂಕೇತ- ವೀರಸಾಗರ ಮಹಾರಾಜರು
ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28 :ಧ್ಯಾನ, ಪ್ರಾರ್ಥನೆಯಿಂದ ದೊರೆಯುವ ಅಂತರಂಗದ ಬೆಳಕು ಅಗೋಚರವಾಗಿದ್ದು, ಪ್ರತಿಯೊಬ್ಬ ದಾರ್ಶನಿಕರು ಧ್ಯಾನದ ಪರಂಪರೆ ಗೌರವಿಸಿದ್ದಾರೆ. ಪ್ರಾರ್ಥನೆ, ಧ್ಯಾನ, ಯೋಗ ಇವೆಲ್ಲವೂ ದೈವತ್ವದ ಸಂಕೇತವಾಗಿವೆ ಎಂದು ವೀರಸಾಗರ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕೈದಿಗಳಿಗೆ ಧ್ಯಾನ ಮತ್ತು ಯೋಗದ ಮಹತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಧ್ಯಾನ ಯೋಗವು ಅಷ್ಟಾಂಗ ಯೋಗದ ಪ್ರಮುಖ ಹಂತವಾಗಿದೆ. ಇದು ಆಳವಾದ ಏಕಾಗ್ರತೆ ಮತ್ತು ಮನಸ್ಸಿನ ಶಾಂತಿಗೆ ದಾರಿಯಾಗಿದೆ. ಇದು ದೈನಂದಿನ ಒತ್ತಡವನ್ನು…


