
ಸಾಹಿತಿ ಪ್ರೊ. ದೊಡ್ಡಣ್ಣ ಭಜಂತ್ರಿಯವರಿಗೆಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ
ಸಪ್ತಸಾಗರ ವಾರ್ತೆ, ವಿಜಯಪುರ, ಆ. 13:ಸಾಹಿತಿ ಪ್ರೊ. ದೊಡ್ಡಣ್ಣ ಭಜಂತ್ರಿ ಅವರಿಗೆ ಸಾಹಿತ್ಯ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಬಬಲೇಶ್ವರ ತಾಲೂಕಿನ ವಿಜಯಪುರ ಜಿಲ್ಲೆಯ ನಿಡೋಣಿ ಗ್ರಾಮದಲ್ಲಿ ಜರುಗಿದ 918ನೇ ಚಂದಯ್ಯ ಶರಣರ ಜಯಂತಿಯ ಆಚರಣೆಯ ಕಾರ್ಯಕ್ರಮದಲ್ಲಿ ನಿಡೋಣಿಯ ಕಾಯಕಯೋಗಿ ಶರಣ ನುಲಿಯ ಚಂದಯ್ಯ ಭಜಂತ್ರಿ ಅಭಿವೃದ್ಧಿ ಸಂಘದವರು ಖ್ಯಾತ ಬಂಡಾಯ ಸಾಹಿತಿ ಪ್ರೊ.ದೊಡ್ಡಣ್ಣ ಬಜಂತ್ರಿ ಅವರಿಗೆ “ಸಾಹಿತ್ಯ ಭೂಷಣ”ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಪ್ರೊ. ದೊಡ್ಡಣ್ಣ ಭಜಂತ್ರಿಯವರು ಕಾಲ ಕೆಟ್ಟತ ತಂಗಿ, ಲಚ್ಚ, ತುಂತುರು, ತಲ್ಲಣದ ಹಕ್ಕಿಹಾಡು,…