‘ನಾನು-ನನ್ನದು’ ಮನೋಭಾವದಿಂದ ದೇಶ-ಸಮಾಜದ ಚಿಂತನೆ ಕ್ಷೀಣಿಸಿದೆ: ಡಾ. ದೇಸಾಯಿ ಯಡಹಳ್ಳಿ ಕಳವಳ
ಸಪ್ತಸಾಗರ ವಾರ್ತೆ,ವಿಜಯಪುರ, ಜು.12: ಸಮಾಜದಲ್ಲಿ ಹೆಚ್ಚುತ್ತಿರುವ ಅನಗತ್ಯ ಆಡಂಬರ, ದುಂದು ವೆಚ್ಚ ಮತ್ತು ಪ್ರದರ್ಶನದ ಮನೋಭಾವಕ್ಕೆ ಕಡಿವಾಣ ಹಾಕುವ ಅಗತ್ಯವಿದ್ದು, ದೇಶ ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿದ ಜೀವನಶೈಲಿ ರೂಢಿಸಿಕೊಳ್ಳಬೇಕೆಂದು ಹಿರಿಯ ಸಹಕಾರಿ ಧುರೀಣ ಹಾಗೂ ಪರಿಸರ ತಜ್ಞ ಡಾ. ಎಂ.ಆರ್. ದೇಸಾಯಿ ಯಡಹಳ್ಳಿ ಕರೆ ನೀಡಿದರು.ಬಾಗಲಕೋಟೆ ಜಿಲ್ಲೆಯ ಬೀಳಗಿ ಸಮೀಪದ ಯಡಹಳ್ಳಿಯಲ್ಲಿ ಆಯೋಜಿಸಿದ್ದ ಅನಗತ್ಯ ಆಡಂಬರದ ಆಚರಣೆಗಳ ಕುರಿತ ಚಿಂತನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಶಕಗಳಲ್ಲಿ “ನಾನು-ನನ್ನದು” ಎಂಬ ಸ್ವಾರ್ಥದ…


