ಡಾ. ಸುರೇಶ ಕಾಗಲ್ಕರ್ ರಾಜ್ಯ ಯುರಾಲಜಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 10:ಇತ್ತೀಚೆಗೆ ಗದಗದಲ್ಲಿ ನಡೆದ 31ನೇ ರಾಜ್ಯ ಯುರಾಲಜಿ ಸಮ್ಮೇಳನದಲ್ಲಿ 2026–28ನೇ ಅವಧಿಗೆ ವಿಜಯಪುರದ ಖ್ಯಾತ ಮೂತ್ರಪಿಂಡ ತಜ್ಞ ಡಾ. ಸುರೇಶ ಕಾಗಲ್ಕರ್ ಅವರನ್ನು ಕರ್ನಾಟಕ ಯುರಾಲಜಿ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷ ಡಾ. ನವೀನ ಎಚ್. ತಿಳಿಸಿದ್ದಾರೆ.ಡಾ. ಸುರೇಶ ಕಾಗಲ್ಕರ್ ಅವರು ಈ ಹಿಂದೆ ರಾಜ್ಯ ಯುರಾಲಜಿ ಸಂಘದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಚೇರ್ಮನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ…


