ಆರ್ಥಿಕ- ಸಾಮಾಜಿಕ ಪ್ರಗತಿಗೆ ಉತ್ತೇಜನ ನೀಡಿ- ಮಲ್ಲಿಕಾರ್ಜುನ ಲೋಣಿ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 30:ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳವಾಗಿದ್ದು, 2024-25ನೇ ಸಾಲಿನಲ್ಲಿ 25.59 ಲಕ್ಷ ಲಾಭ ಮಾಡಿ, ಶೇ. 15 ರಂತೆ ಲಾಭಾಂಶ ಸದಸ್ಯರುಗಳ ಶೇರ ಮೇಲೆ ಹಂಚಿಕೆ ಮಾಡಲಾಗುತ್ತದೆ ಎಂದು ದಿ ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ,ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.ರವಿವಾರದಂದು ನಗರದ ವನಶ್ರೀ ಭವನದಲ್ಲಿ ದಿ. ಕರ್ನಾಟಕ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ 25ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಬ್ಯಾಂಕು ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು…


