ಯುವಕರಿಗೆ ವೃತ್ತಿಪರ ಕ್ರೀಡೆಗೆ ಪ್ರೋತ್ಸಾಹ: ಸುನೀಲಗೌಡ ಪಾಟೀಲ

ಬಬಲೇಶ್ವರ ಪ್ರೀಮಿಯರ್ ಲೀಗ್-2 ಸಮಾರೋಪ; ಗೇಮ್ ಚೇಂಜರ್ ಜೈನಾಪುರ ಚಾಂಪಿಯನ್ ಸಪ್ತಸಾಗರ ವಾರ್ತೆ,ವಿಜಯಪುರ, ಜು. 16:ಯುವಕರು ವೃತ್ತಿಪರ ಕ್ರೀಡಾಪಟುಗಳಾಗಿ ಬೆಳೆಯಲು ಅಗತ್ಯ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.ಬಬಲೇಶ್ವರದಲ್ಲಿ ದಿ. ಶ್ರೀ ಬಿ.ಎಂ. ಪಾಟೀಲ ಅವರ ಸ್ಮರಣಾರ್ಥ ಶಾಂತವೀರ ಕ್ರಿಕೆಟ್ ಕ್ಲಬ್ ಹಾಗೂ ಶ್ರೀ ಸುನೀಲಗೌಡ ಪಾಟೀಲ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಬಬಲೇಶ್ವರ ಪ್ರೀಮಿಯರ್ ಲೀಗ್ (ಬಿಪಿಎಲ್) ಸೀಸನ್-2 ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ…

Read More

ಗಿಡ-ಮರಗಳ ಲಾಲನೆ ಪೋಷಣೆ ಅಗತ್ಯ: ನ್ಯಾಯಾಧೀಶ ಹರೀಶ ಎ.ಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ.5: ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಪರಿಸರ ಸಮತೋಲನ ಕಾಪಾಡಲು ಗಿಡ-ಮರಗಳ ಲಾಲನೆ ಪೋಷಣೆ ಮಾಡುವುದು ತೀರಾ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹರೀಶ ಎ. ಹೇಳಿದರು.ವಿಶ್ವ ಪರಿಸರ ದಿನದ ಅಂಗವಾಗಿ ಕೂಡಗಿ ಎನ್ ಟಿಪಿಸಿ ವಿದ್ಯುತ್ ಸ್ಥಾವರದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು…

Read More

ನವಜಾತ ಶಿಶು ಪುನರುಜ್ಜೀವನ ತರಬೇತಿ ಅತ್ಯಂತ ಅಗತ್ಯ: ಡಾ. ಇನಾಮದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 11:ನವಜಾತ ಶಿಶುಗಳ ಜೀವಿತಾವಧಿ ಹೆಚ್ಚಿಸಲು ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸಂರಚಿತ ನವಜಾತ ಶಿಶು ಪುನರುಜ್ಜೀವನ ತರಬೇತಿ ಅತ್ಯಂತ ಅಗತ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.‌ಅರುಣ ಚಂ. ಇಮಾಮದಾರ ಹೇಳಿದ್ದಾರೆ.ರವಿವಾರ ನಗರದ ಬಿ.ಎಲ್‌.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ‌ ನಡೆದ ರಾಷ್ಟ್ರವ್ಯಾಪಿ ನವಜಾತ ಶಿಶು ಪುನರುಜ್ಜೀವನ ತರಬೇತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಶಾಸ್ತ್ರ ವಿಭಾಗದ ಸೇವಾ ಮನೋಭಾವ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳು‌ ಈ ನಿಟ್ಟಿನಲ್ಲಿ ಪ್ರಮುಖವಾಗಿವೆ ಎಂದು ಅವರು…

Read More

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಿರಿಧಾನ್ಯಗಳ ಬಳಕೆ ಅಗತ್ಯ: ಡಾ. ಆನಂದ

ಸಪ್ತಸಾಗರ ವಾರ್ತೆ, ವಿಜಯಪುರ ಜ.3: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ನಗರದ ಜ್ಞಾನಯೋಗಾಶ್ರಮದಲ್ಲಿ ಆಯೋಜಿಸಲಾದ ಸಿರಿಧಾನ್ಯ ನಡಿಗೆ (ವಾಕಥಾನ್) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಆನಂದ ಕೆ. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯಗತ್ಯವಾಗಿದೆ. ಸಿರಿಧಾನ್ಯ ಆಹಾರ ಬಳಕೆ‌ ಮಾಡಬೇಕು.ಮಧುಮೇಹ, ರಕ್ತದೊತ್ತಡದಂತಹ ರೋಗಗಳಿಗೆ ಒಳಗಾಗುವುದನ್ನು ಕಾಣುತ್ತಿದ್ದೇವೆ. ಇಂತಹ ರೋಗಗಳಿಂದ ದೂರ ಉಳಿಯಲು ಸಿರಿಧಾನ್ಯಗಳು ಅತ್ಯಂತ ಸಹಕಾರಿ ಆಗಿವೆ ಎಂದು ಹೇಳಿದರು.ನಮ್ಮ ಹಿರಿಯರ ಆಹಾರ…

Read More

ಮಾನಸಿಕ ಆರೋಗ್ಯ ಕಾಪಾಡುವುದು ಅವಶ್ಯ: ಪ್ರೊ. ವಿಜಯಾ ಕೋರಿಶೆಟ್ಟಿ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 2: ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮಹತ್ವದ ಅಂಶವಾಗಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಸಮಾಜ ಕಾರ್ಯ ವಿಭಾಗ ಹಾಗೂ ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಪಿಎಮ್ -ಉಷಾ, ಭಾರತದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ “ಮಾನಸಿಕ ಬೆಂಬಲ ಹೊಂದಲು ಆಪ್ತಸಮಾಲೋಚನೆ”…

Read More

ಸಹಕಾರಿ ಯಶಸ್ಸಿಗೆ ಕಾನೂನು ಅರಿವು ಅಗತ್ಯ : ಸಚಿವ ಶಿವಾನಂದ

ಸಪ್ತಸಾಗರ ವಾರ್ತೆ ವಿಜಯಪುರ, ಅ. 10: ಸಹಕಾರಿ ರಂಗದಲ್ಲಿರುವ ಎಲ್ಲರೂ ಪ್ರಾಮಾಣಿಕ, ಪಾರದರ್ಶಕ ಹಾಗೂ ಸೇವಾ ಮನೋಭಾವದ ಜೊತೆಗೆ ಕಾನೂನಿನ ಅರಿವಿನೊಂದಿಗೆ ಕೆಲಸ ಮಾಡಿಬೇಕಿದೆ. ಹಾಗಾದಲ್ಲಿ ಸಹಕಾರಿ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಶುಕ್ರವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ವಿಜಾಪುರ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರಿ…

Read More

ಬದುಕಿನ ನೆಮ್ಮದಿಗೆ ದೇವರ ಸ್ಮರಣೆ ಅಗತ್ಯ- ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 5: ದೇವರ ಸ್ಮರಣೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿ, ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸೋಮವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮದಲ್ಲಿ ‘ಉದಯಲಿಂಗೇಶ್ವರ ಚರಿತಾಮೃತ’ ಧ್ವನಿಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ದೇವರ ನಾಮ ಸ್ಮರಣೆಯು ಸರಳ. ಆದರೆ ಪರಿಣಾಮಕಾರಿಯಾಗಿದೆ. ಇದು ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ…

Read More

ಮಾನವನ ಬಾಳು ಉಜ್ವಲಗೊಳ್ಳಲು ಅಧ್ಯಾತ್ಮ ಬೇಕು-ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ ವಿಜಯಪುರ, ಆ. 2: ಜಗ ಬೆಳಗಲು ಸೂರ್ಯ, ಬದುಕು ಬೆಳಗಲು ಗುರು ಬೇಕು. ಭೌತಿಕ ಬದುಕನ್ನು ಬೆಳಗಲು ಅಧ್ಯಾತ್ಮ ಬೇಕು. ಅಂದಾಗ ಮಾನವನ ಬಾಳು ಉಜ್ವಲಗೊಳ್ಳಲಿದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶ್ರಾವಣ ಮಾಸದ ನಿಮಿತ್ತ ಶುಕ್ರವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಹಿರೇಮಠದಲ್ಲಿ ನಡೆಯುತ್ತಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣದಲ್ಲಿ ತೊಟ್ಟಿಲು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.‘ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ….

Read More

ಜೀವನ್ಮುಕ್ತಿಗೆ ಗುರೂಪದೇಶ ಬೇಕು:ಡಾ. ಮೇತ್ರಿ

ಸಪ್ತಸಾಗರ ವಾರ್ತೆ, ಜು. 31:ಹಿಂದೂಗಳಿಗೆ ಶ್ರಾವಣ ಮಾಸ ಒಂದು ಪವಿತ್ರ ಹಬ್ಬ. ಸತ್ಸಂಗದಲ್ಲಿ ಪಾಲ್ಗೊಂಡು ಪುರಾಣ ಪ್ರವಚನಗಳನ್ನು ಶ್ರವಣ ಮಾಡಿದರೆ ಆತ್ಮಾನಂದ ಪ್ರಾಪ್ತಿಯಾಗುವುದು. ಎಲ್ಲರೂ ಕ್ರಮವಾಗಿ ಶ್ರವಣ,ಜಪ,ತಪ,ಧ್ಯಾನ ಮತ್ತು ದಾನಗಳೆಂಬ ಪಂಚ ಕ್ರಿಯೆಗಳನ್ನು ಸಿದ್ಧಿಸಿಕೊಳ್ಳಬೇಕೆಂದು ಡಾ.ಸಂಗಮೇಶ ಮೇತ್ರಿಯವರು ಹೇಳಿದರು.ವಿಜಯಪುರ ಕೀರ್ತಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರವಚನಕಾರರಾದ ಪ.ಪೂ.ಶ್ರೀ ಸಂಗಮೇಶ ಸ್ವಾಮಿಗಳು ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಪ್ರವಚನವನ್ನು ಶುಭಾರಂಭ ಮಾಡಿದರು. ಸದ್ಭಕ್ತರು ಪ್ರಪಂಚದೊಡನೆ ಪರಮಾರ್ಥ ಸಾಧಿಸಲು ಗುರು ತೋರುವ ಪಥದಲ್ಲಿ…

Read More