ಕುರುಬರ ಕಲೆ, ಸಂಸ್ಕೃತಿ ಅಕಾಡೆಮಿ ಸ್ಥಾಪನೆಗೆ ಆಗ್ರಹ
ವಿಜಯಪುರದಲ್ಲಿ ಕುರುಬ ಸಮಾಜದಿಂದ ಸರ್ಕಾರಕ್ಕೆ ಮನವಿ ಸಪ್ತಸಾಗರ ವಾರ್ತೆ,ವಿಜಯಪುರ, ಅ. 13:ಕುರುಬ ಸಮುದಾಯದ ವಿಶಿಷ್ಟ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೂಡಲೇ ಕುರುಬರ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪಿಸಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.ಕುರುಬ ಸಮುದಾಯವು ಶತಮಾನಗಳಿಂದ ಉಳಿಸಿಕೊಂಡು ಬಂದಿರುವ ಡೊಳ್ಳಿನ ಪದ, ಡೊಳ್ಳಿನ ಕೈಪಟ್ಟು, ಡೊಳ್ಳಿನ ವಾಲಗ, ಡೊಳ್ಳು ಕುಣಿತ, ದಟ್ಟಿ ಕುಣಿತ, ಗೊರವರ ಕುಣಿತ, ವೀರಮಕ್ಕಳ ಕುಣಿತ, ವಗ್ಗಯ್ಯರ ಪದ–ಕುಣಿತ, ಟಗರಜೋಗಿ ಕಲೆ,…


