ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ನಾಪತ್ತೆ

ಸಪ್ತಸಾಗರ ವಾರ್ತೆ,ವಿಜಯಪುರ, ನ. 11:ಕಾಲುವೆಯಲ್ಲಿ ಜಾರಿ ಬಿದ್ದು ಓರ್ವ ಯುವತಿ ಸೇರಿ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದ ಬಳಿಯ ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಯಲ್ಲಿ ಸಂಭವಿಸಿದೆ.ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾದವರು ಒಂದೇ ಕುಟುಂಬದ ಇಬ್ಬರು ಬಾಲಕರು ಹಾಗೂ ಓರ್ವ ಯುವತಿ ಸೇರಿದ್ದಾರೆ.ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸುಡಗಾಡು ಸಿದ್ದ ಸಮುದಾಯದ ಬಾಲಕರು ಹಾಗೂ ಯುವತಿ ಬಸಮ್ಮ ಕೊಣ್ಣೂರ (21) ಸಂತೋಷ ಕೊಣ್ಣೂರು (16) ಹಾಗೂ ರವಿ ಕೊಣ್ಣೂರು…

Read More

ಆಟವಾಡುತ್ತ ಬಾವಿಗೆ ಬಿದ್ದು ಬಾಲಕಿ ಸಾವು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 12: ಬಾಲಕಿಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಂಡಿ ಪಟ್ಟಣ ಹೊರವಲಯದ ಧನಸಿಂಗ್ ತಾಂಡಾದಲ್ಲಿ ನಡೆದಿದೆ.ಅರ್ಚನಾ ರಾಠೋಡ (8) ಮೃತಪಟ್ಟ ಬಾಲಕಿ.ತಾಯಿಯೊಂದಿಗೆ ಕುರಿ ಮೇಯಿಸಲು ಹೋದಾಗ ಆಟವಾಡುತ್ತಾ ಆಕಸ್ಮಿಕವಾಗಿ ಬಾಲಕಿ ಅರ್ಚನಾ ಸೋಮವಾರ ಸಂಜೆ ಬಾವಿಯಲ್ಲಿ ಬಿದ್ದಿದ್ದಳು.ಅಗ್ನಿಶಾಮಕ ದಳದ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ಮಂಗಳವಾರ ಬಾಲಕಿ ಶವವನ್ನು ಹೊರ ತೆಗೆದಿದ್ದಾರೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More