10 ಕೆಜಿ ಫೈಬರ್ ಗ್ಯಾಸ್ ಸಿಲಿಂಡರ್ ವಿತರಣೆ ಆರಂಭ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 12: ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಹಯೋಗದಲ್ಲಿ ಭಾರತ್ ಗ್ಯಾಸ್ನ 10 ಕೆಜಿ ತೂಕದ ನೂತನ ಫೈಬರ್ ಸಿಲಿಂಡರ್ ವಿತರಣಾ ಕಾರ್ಯಕ್ಕೆ ನಗರದ ಮಧುವನ ಸಭಾಂಗಣದಲ್ಲಿ ವೈಭವದ ಚಾಲನೆ ದೊರೆಯಿತು.ಸಮಾರಂಭದಲ್ಲಿ ನೂತನ ಫೈಬರ್ ಸಿಲಿಂಡರ್ ಅನಾವರಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.ಈ ವೇಳೆ ಮಾತನಾಡಿದ ಸಮಾಜ ಸೇವಕ ಹಾಗೂ ಓಂ ಸಾಯಿ ಹೋಂ ನೀಡ್ಸ್ ಮುಖ್ಯಸ್ಥ ಉಮೇಶ ಕಾರಜೋಳ, ಅಡುಗೆ ಅನಿಲವು ಜನಜೀವನದ ಅವಿಭಾಜ್ಯ ಅಗತ್ಯ ವಸ್ತುವಾಗಿದೆ. ಈ ಹಿಂದೆ ಭಾರೀ ಲೋಹದ ಸಿಲಿಂಡರ್ಗಳ…


