ಅನಗತ್ಯ ನೀರು ಪೋಲು ಮಾಡಿದರೆ 2 ಸಾವಿರ ರೂ. ದಂಡ: ಅನಧಿಕೃತ ಸಂಪರ್ಕ ಹೊಂದಿದ್ದರೆ 5 ಸಾವಿರ ರೂ. ದಂಡ
ಸಪ್ತಸಾಗರ ವಾರ್ತೆ,ವಿಜಯಪುರ, ಏ. 4: ಅನವಶ್ಯಕವಾಗಿ ಕುಡಿಯುವ ನೀರು ಪೋಲು ಮಾಡುವರಿಗೆ 2 ಸಾವಿರ ರೂ. ಹಾಗೂ ಅನಧಿಕೃತ ನಳ ಸಂಪರ್ಕ ಪಡೆದುಕೊಳ್ಳುವ ಹಾಗೂ ಪಡೆದುಕೊಂಡವರಿಗೆ ಹೊಸ ನಳದ ಶುಲ್ಕದ ಜೊತೆಗೆ ಹೆಚ್ಚುವರಿ 5 ಸಾವಿರ ರೂ. ದಂಡ ವಿಧಿಸಲಾಗುವುದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.ನಗರದ ವಿವಿಧ ವಲಯ, ವಾರ್ಡಗಳಲ್ಲಿ ಪೂರೈಕೆಯಾಗುವ ನೀರನ್ನು ಕುಡಿಯುವ ಸಲುವಾಗಿ ಮಾತ್ರ ಪರಿಗಣಿಸಿ ನೀರಿನ ಪ್ರಮಾಣವನ್ನು ಅಂದಾಜಿಸಲಾಗಿರುತ್ತದೆ.ದಿನಂಪ್ರತಿ ಪ್ರತಿಯೊಬ್ಬರಿಗೆ ತಲಾ 135…


