
ಕಲ್ಬುರ್ಗಿ ವಲಯ ಮಟ್ಟದ ಮಹಿಳಾ ಚೆಸ್ ಪಂದ್ಯಾವಳಿ: ಬಿ ಎಲ್ ಡಿ ಇ ಆಯುರ್ವೇದ ಕಾಲೇಜಿನ ಮಹಿಳಾ ತಂಡಕ್ಕೆ ಪ್ರಥಮ ಸ್ಥಾನ
ಸಪ್ತಸಾಗರ ವಾರ್ತೆ, ವಿಜಯಪುರ, ಆ. 5: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜಿನ ಮಹಿಳಾ ತಂಡ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಲಬುರಗಿ ವಲಯ ಮಟ್ಟದ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.ರಾಯಚೂರಿನ ನವೋದಯ ಡೆಂಟಲ್ ಕಾಲೇಜಿನಲ್ಲಿ ಆಗಷ್ಟ 1 ಮತ್ತು 2 ರಂದು ನಡೆದ ಈ ಪಂದ್ಯಾವಳಿಯಲ್ಲಿ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ದೀಪ್ತಿ ಮಂಗಲಗಿ, ಗೀತಾಂಜಲಿ ಮುದ್ನೂರ, ಸಾನಿಕಾ ದೇಶಪಾಂಡೆ, ಅನುರಾಧಾ ರೆಡ್ಡಿ ಮತ್ತು ಪೂಜಾ ಬಿರಾಜದಾರ ಅವರನ್ನೊಳಗೊಂಡ ತಂಡ…