
ಪ್ರತಿ ಗಣೇಶ ಮಹಾಮಂಡಳಿಗೆ ರೂ.5001 ನೆರವು: ಶಾಸಕ ಯತ್ನಾಳ್ ಘೋಷಣೆ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 16: ನಗರದ ಪ್ರತಿ ಗಣೇಶ ಮಹಾಮಂಡಳಿಗಳಿಗೆ ವೈಯುಕ್ತಿಕವಾಗಿ ರೂ.5001 ನೀಡಲಾಗುವುದು. ತಮ್ಮ ತಮ್ಮ ಮಹಾಮಂಡಳಿಗಳ ವೇದಿಕೆಗೆ ಆಗಮಿಸಿ ಹಣ ನೀಡಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಘೋಷಣೆ ಮಾಡಿದರು.ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಶ್ರೀ ಶಿವಾನುಭವ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಹಮ್ಮಿಕೊಂಡಿದ್ದ ವಿಜಯಪುರ ನಗರದ ಎಲ್ಲ ಗಜಾನನ ಮಹಾಮಂಡಳಿಗಳ ಸಭೆಯಲ್ಲಿ ಅವರು ಮಾತನಾಡಿದರು.ಪರಿಸರ ಸಂರಕ್ಷಣೆ…