
ಸರಳ ರೀತಿಯಲ್ಲಿ ನಡೆದ ಗಜಾನನ ವಿಸರ್ಜನೆ ಮೆರವಣಿಗೆ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 4:ಗಣೇಶೋತ್ಸವ ವಿಸರ್ಜನೆ ವೇಳೆ ವಿದ್ಯುತ್ ಅವಘಡದಿಂದ ಯುವಕ ಅಸುನೀಗಿ, ಕೆಲವು ಯುವಕರು ಗಾಯಗೊಂಡಿರುವ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಗಜಾನನ ಮಹಾಮಂಡಳ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಸಾಂಕೇತಿಕವಾಗಿ ನಡೆಯಿತು.ಪ್ರತಿ ವರ್ಷ ಹತ್ತಾರು ರೀತಿಯ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯುವ ಮೆರವಣಿಗೆಗೆ ಈ ಬಾರಿ ಸಾಂಪ್ರದಾಯಿಕತೆ ಮಾತ್ರ ಸೀಮಿತವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೂ ಸಹ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಿಲ್ಲ.ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ವಿವಿಧ…