ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ:ವಿಸ್ತೀರ್ಣ ಹೆಚ್ಚಳಕ್ಕೆ ನಿರ್ಧಾರ: ಶಾಸಕ ಯತ್ನಾಳ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ.1: ನಗರದ ಐತಿಹಾಸಿಕ ತಾಸಬಾವಡಿ ಆವರಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 30×80 ಅಡಿ ಅಳತೆಯ ಶಾಶ್ವತ ಹೊಂಡ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.ಮಂಗಳವಾರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನು ಕರೆಸಿ ಈ ಕುರಿತು ಚರ್ಚಿಸಿದ ಶಾಸಕ ಯತ್ನಾಳ, ತಾಸಬಾವಡಿ ಬಳಿ ಹಲವು ವರ್ಷಗಳಿಂದ ಕುಂಭಪೂಜೆ, ಮರಗಮ್ಮ ದೇವಿ ಜಾತ್ರೆಗೆ ಮಡಿ ನೀರು ತರುವುದು ಸೇರಿದಂತೆ ಗಣೇಶ ವಿಸರ್ಜನೆ ನಡೆಯುತ್ತಿದೆ. ಹೀಗಿರುವಾಗ ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ…


