ಸ್ಪಂದನಾ ಹಾಸ್ಪಿಟಲ್ ನಲ್ಲಿ ಹೆಣ್ಣು ಮಗು ಜನಿಸಿದರೆ ಉಚಿತ ಚಿಕಿತ್ಸೆ
ಸಪ್ತಸಾಗರ ವಾರ್ತೆ,ಇಂಡಿ, ಮಾ. 14 : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಪಂದನಾ ಆಸ್ಪತ್ರೆಯಲ್ಲಿ ಮಾ. 22 ರಿಂದ ಒಂದು ವರ್ಷದ ಅವಧಿ ವರೆಗೆ ಹೆಣ್ಣು ಮಗು ಜನಿಸಿದರೆ ಸಹಜ ಹೆರಿಗೆ ಹಾಗೂ ಸಿಜರಿನ್ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದು ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಲಕ್ಷ್ಮಿಕಾಂತ ಮೇತ್ರಿ ಹೇಳಿದರು.ನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಇರುವ ಸ್ಪಂದನಾ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಅಸಂಘಟಿತ ಕಟ್ಟಡ ಕಾರ್ಮಿಕರು, ಬಿಪಿಎಲ್, ಎಪಿಎಲ್, ಸಾಮಾನ್ಯ…


