ಗಣೇಶ ಚತುರ್ಥಿ: ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 26:ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾಲಕ್ಕೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನವಾದ ಆಗಸ್ಟ್ 27ರ ಬೆಳಿಗ್ಗೆ 6 ರಿಂದ ಆಗಸ್ಟ್ 28ರ ಬೆಳಿಗ್ಗೆ 6 ಗಂಟೆವರೆಗೆ ಹಾಗೂ 5ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಆಗಸ್ಟ್ 31ರ ಬೆಳಿಗ್ಗೆ…

Read More

ಮನೆ ಮನೆಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.25:ನಗರದ ಪ್ರಸಿದ್ಧ ಕಾಮಿತಾರ್ಥಪ್ರದ ಶ್ರೀನಿವಾಸ ದೇವಸ್ಥಾನದ ಆವರಣದಲ್ಲಿ ನಡೆಯುವ ಭವ್ಯ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಮತ್ತು ಮನೆ ಮನೆಗೂ ಶ್ರೀನಿವಾಸ ಕಾರ್ಯಕ್ರಮಕ್ಕೆ ಗುರುಗಳು ಚಾಲನೆ ನೀಡಿದರು.ಶ್ರೀಪಂ. ಸಂಜೀವ ಆಚಾರ ಮಧಬಾವಿ ಅವರ ನೇತೃತ್ವದಲ್ಲಿ ಮತ್ತು ಸಂಜೀವ ದೇಸಾಯಿ ಅವರ ಮಾರ್ಗದರ್ಶನದಿಂದ ಕಾರ್ಯಕ್ರಮ ಜರುಗುವುದು.ಗುರುಗಳ ಮಂತ್ರಾಕ್ಷತೆ ಅನುಗ್ರಹದಿಂದ ಬರುವ ಗುರುವಾರದಿಂದ ಕಾರ್ಯಕ್ರಮ ನಡೆಯುತ್ತಿದೆ. ಭಾಗ್ಯನಗರಕೆ ನಮ್ಮ ತಂಡದವರು ಆಗಮಿಸಿದ್ದರು. ಸಂಚಾಲಕ ಸಂಜೀವ ದೇಸಾಯಿ ಹಾಗೂ ಸದ್ಯಸರಾದ ಕೃಷ್ಣಾಜೀ ಕುಲಕರ್ಣಿ, ಗೋವಿಂದರಾಜ ದೇಶಪಾಂಡೆ, ಆನಂದ ಕುಲಕರ್ಣಿ, ಗುರುರಾಜ…

Read More

ವಿಜಯಪುರ ಚಾ ಲಂಬೋದರನ ಭವ್ಯ ಮೆರವಣಿಗೆ ನಾಳೆ

ಸಪ್ತಸಾಗರ ವಾರ್ತೆ ವಿಜಯಪುರ, ಆ. 25:ಕೆ.ಎಸ್.ಆರ್.ಟಿ.ಸಿ, ದಾನೇಶ್ವರಿ ಹಾಗೂ ಮಹಾತ್ಮ ಗಾಂಧಿ ಕಾಲೊನಿಯ ವರದ ಹನುಮಾನ್ ಗಜಾನನ ತರುಣ ಮಂಡಳಿ ವತಿಯಿಂದ ನಾಳೆ ಆ.26 ರಂದು ನಗರದಲ್ಲಿ ವಿಜಯಪುರ ಚಾ ಲಂಬೋದರನ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಸಂಜೆ 4 ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ನೇತಾಜಿ ಸುಭಾಸಚಂದ್ರ ಭೋಸ್ ರಸ್ತೆ ಮೂಲಕ ಶ್ರೀ ವರದ ಹನುಮಾನ್ ದೇವಸ್ಥಾನ ವರೆಗೆ ಸಾಗಲಿದೆ.ಕಾರಣ…

Read More

ಬದುಕಿನ ನೆಮ್ಮದಿಗೆ ದೇವರ ಸ್ಮರಣೆ ಅಗತ್ಯ- ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಆ. 5: ದೇವರ ಸ್ಮರಣೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿ, ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸೋಮವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮದಲ್ಲಿ ‘ಉದಯಲಿಂಗೇಶ್ವರ ಚರಿತಾಮೃತ’ ಧ್ವನಿಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ದೇವರ ನಾಮ ಸ್ಮರಣೆಯು ಸರಳ. ಆದರೆ ಪರಿಣಾಮಕಾರಿಯಾಗಿದೆ. ಇದು ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ…

Read More