ಗೋಳಗುಮ್ಮಟ ಸ್ವಚ್ಛತೆಗೆ ಇಂಡಿಯನ್ ಆಯಿಲ್ ಬಳಗದ ಶ್ರಮದಾನ
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಮೇಯರ್ ಕರಡಿ ಸಪ್ತಸಾಗರ ವಾರ್ತೆ,ವಿಜಯಪುರ, ಸ. 27: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕ ಗೋಳಗುಮ್ಮಟದ ಸೌಂದರ್ಯ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಅಧಿಕಾರಿಗಳು, ಸಿಬ್ಬಂದಿ ಹಾಗೂ ಡೀಲರ್ಗಳು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.ಭಾರತ ಸರ್ಕಾರದ ಸ್ವಚ್ಛ ಭಾರತ ಮಿಷನ್ ಅಂಗವಾಗಿ ಗೋಳಗುಮ್ಮಟದ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಐಒಸಿಎಲ್ನ ರಿಟೇಲ್ ಸೇಲ್ಸ್ ಅಧಿಕಾರಿಗಳು, ಡಿಪೋ ಅಧಿಕಾರಿಗಳು, ವಿಜಯಪುರದ ಇಂಡಿಯನ್ ಆಯಿಲ್ ವಿತರಕರು ಹಾಗೂ ಸಿಬ್ಬಂದಿ…


