ಐತಿಹಾಸಿಕ ಸ್ಮಾರಕಗಳಲ್ಲಿ ಸರ್ಕಾರಿ ಕಚೇರಿಗಳ ಠಿಕಾಣೆ! ವಿಜಯಪುರದ ಪರಂಪರೆಗೆ ಯಾರು ಕಾವಲು?

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ ವಿಜಯಪುರ, ಜು. 12:ವಿಶ್ವದ ನಕ್ಷೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಐತಿಹಾಸಿಕ ನಗರ ವಿಜಯಪುರದಲ್ಲಿ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾಕಮಾನ್ ಸೇರಿದಂತೆ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳಿವೆ. ಆದರೆ ಪರಂಪರೆಯ ಪ್ರತೀಕಗಳಾಗಿರಬೇಕಾದ ಹಲವು ಐತಿಹಾಸಿಕ ಕಟ್ಟಡಗಳು ಇಂದು ಸರ್ಕಾರಿ ಕಚೇರಿಗಳಾಗಿ ಬಳಕೆಯಾಗುತ್ತಿರುವುದು ಪರಂಪರೆ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.ವಿಜಯಪುರದ ಬಹುತೇಕ ಐತಿಹಾಸಿಕ ಪಾರಂಪರಿಕ ಕಟ್ಟಡಗಳಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಖಜಾನೆ ಕಚೇರಿ, ಭೂದಾಖಲೆ (ಸರ್ವೇ/ಭೂಮಾಪನ) ಇಲಾಖೆ,…

Read More

ಜಿಲ್ಲಾಧಿಕಾರಿ ಡಾ.ಆನಂದ ಅವರಿಂದ ಸರ್ಕಾರಿ ಕಚೇರಿಗಳು, ಆಸ್ಪತ್ರೆಗೆ ಭೇಟಿ ಪರಿಶೀಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 24:ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಗುರುವಾರ ವಿಜಯಪುರ ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ನಗರದ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲೊಂದಾದ ಭೂ ಸುರಕ್ಷಾ ಯೋಜನೆಯ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪರಿಶೀಲನೆ ನಡೆಸಿದರು.ಆಧುನಿಕ ಅಭಿಲೇಖಾಲಯ ಕೊಠಡಿಗೆ ಭೇಟಿ ನೀಡಿ ಗಣಕೀಕರಣ ಕಾರ್ಯ ಪರಿಶೀಲಿಸಿದ ಅವರು, ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಗಣಕೀಕೃತಗೊಳಿಸುವುದರಿಂದ ರೈತರಿಗೆ-ಸಾರ್ವಜನಿಕರಿಗೆ ಆನ್‍ಲೈನ್ ಮೂಲಕ ದಾಖಲೆಗಳು ಸುಲಭವಾಗಿ ದೊರೆಯಲಿರುವುದರಿಂದ ಸಮಯ…

Read More