ಕಲಿತ ಸರ್ಕಾರಿ ಶಾಲೆಗೆ ಅಪರ ಜಿಲ್ಲಾಧಿಕಾರಿ ₹ 50 ಸಾವಿರ ದೇಣಿಗೆ
ಸಪ್ತಸಾಗರ ವಾರ್ತೆ ಬಬಲೇಶ್ವರ, ಡಿ. 15: ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ತಾವು ಕಲಿತ ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ₹ 50 ಸಾವಿರ ದೇಣಿಗೆ ಚೆಕ್ ನೀಡಿದ್ದಾರೆ.ಶಾಲೆಯ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಜಂಟಿ ಖಾತೆಗೆ ಸ್ಥಿರ ಠೇವಣಿಯಾಗಿ (ಎಫ್ ಡಿ) ಇಡಲು ಮುಖ್ಯಗುರುಗಳು ಹಾಗೂ ಶಾಲಾ ಎಸ್ಡಿಎಂಸಿ ಅಧ್ಯಕ್ಷರಿಗೆ ಚೆಕ್ ನೀಡಿದರು.ಶಾಲೆಯ ಜಂಟಿ ಖಾತೆಯಲ್ಲಿ ಇಟ್ಟ ಸ್ಥಿರ ಠೇವಣಿಯಿಂದ ಪ್ರತಿ ವರ್ಷ ಬರುವ ಬಡ್ಡಿ ಹಣವನ್ನು ಶಾಲೆಯ…


