ಗುಟ್ಕಾ ನಿಷೇಧಕ್ಕೆ ಸ್ವಾಗತ; ಯುವಕರ ಆರೋಗ್ಯದೊಂದಿಗೆ ರಾಜಕೀಯ ಮಾಡಬಾರದು-ಎಸ್. ವಿ. ಪಾಟೀಲ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 14:ಅಡಿಕೆ ಬೆಳೆಗಾರರ ಹಿತಾಸಕ್ತಿಯ ಹೆಸರಿನಲ್ಲಿ ಗುಟ್ಕಾ ಉತ್ಪನ್ನಗಳ ಪರ ನಿಲ್ಲುವ ರಾಜಕೀಯ ನಾಯಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಯುವಜನರ ಆರೋಗ್ಯದ ದೃಷ್ಟಿಯಿಂದ ಗುಟ್ಕಾ ನಿಷೇಧದಂತಹ ಕಠಿಣ ಕ್ರಮಗಳನ್ನು ಸ್ವಾಗತಿಸಬೇಕು ಎಂದು ಎಸ್.ವಿ. ಪಾಟೀಲ ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಅಡಿಕೆ ವಹಿವಾಟು ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ. ಆದರೆ ಅಡಿಕೆಯನ್ನು ಮಿಶ್ರಣ ಮಾಡಿ ತಯಾರಿಸುವ ಗುಟ್ಕಾ ಹಾಗೂ ಇತರ ತಂಬಾಕು ಉತ್ಪನ್ನಗಳಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ….


