ಕುಂಚದಲ್ಲಿ ಪ್ರಾಚೀನ ಸ್ಮಾರಕಗಳ ಸೆರೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.14: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಹಳೆಯ ತಹಶೀಲದಾರ ಕಚೇರಿ ರಸ್ತೆಯಲ್ಲಿರುವ ಎತ್ತರವಾದ ಐತಿಹಾಸಿಕ ಸ್ಮಾರಕ ಸಾಥಮಂಜಿಲ್ ಹಾಗೂ ಜಲಮಂಜಿಲ್ ಬಳಿ ಶನಿವಾರ ಸಂಜೆ ಮಹಾರಾಷ್ಟ್ರದ ಕೊಲ್ಹಾಪುರದ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳು ಗುಂಪು ಗುಂಪಾಗಿ ಕುಳಿತು ಸ್ಮಾರಕಗಳ ಚಿತ್ರಬಿಡಿಸುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯಿತು.ಕೊಲ್ಹಾಪುರದ ಸುಮಾರು 30 ಜನ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳನ್ನೊಳಗೊಂಡ ತಂಡವು ಪ್ರಾಚೀನ ಸ್ಮಾರಕಗಳ ಚಿತ್ರ ಬಿಡಿಸುವ ಮೂರು ದಿನಗಳ ಶಿಬಿರವನ್ನು ನಗರದಲ್ಲಿ ಹಮ್ಮಿಕೊಂಡಿದೆ.ಶುಕ್ರವಾರ ಇಬ್ರಾಹಿಂ ರೋಜಾ,…

Read More

ತುಂಬಿದ ಇಬ್ರಾಹಿಂಪುರ ಐತಿಹಾಸಿಕ ‘ಹಿರೇಬಾವಿ’ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗ್ರಹಣ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 12 : ಇದು ವಿಜಯಪುರ ನಗರದ ಮನಗೂಳಿ- ಬಸವನ ಬಾಗೇವಾಡಿ ರಸ್ತೆ ಪಕ್ಕದ ಇಬ್ರಾಹಿಂಪುರ ಬಡಾವಣೆಯಲ್ಲಿರುವ ಪ್ರಾಚೀನವಾದ ಐತಿಹಾಸಿಕ ಹಿರೇಬಾವಿ. ಇದನ್ನು ವಿಜಯಪುರದ ಎರಡನೇ ‘ತಾಜ್ ಬಾವಡಿ’ ಎಂದರೂ ತಪ್ಪಾಗಲಿಕ್ಕಿಲ್ಲ.ಇಬ್ರಾಹಿಂಪುರದ ಹಿರೇಬಾವಿ ನೋಡಿದ ಯಾರಿಗೇ ಆಗಲಿ ಥಟ್ಟನೆ ‘ತಾಜ್ ಬಾವಡಿ’ ಅವರ ನೆನಪಿಗೆ ಬರದೇ ಇರದು.ತಾಜ್ ಬಾವಡಿಯಂತೆಯೇ ವಿಶಾಲವಾಗಿದೆ ಆದಿಲಶಾಹಿ ಕಾಲದ ಈ ಹಿರೇಬಾವಿ. ನೂರಕ್ಕೂ ಅಧಿಕ ಕಟ್ಟೆಗಳು, ಹಲವು ಕಮಾನುಗಳಿರುವ ಅದ್ಭುತ, ಸುಸಜ್ಜಿತ ಹಾಗೂ ಅತ್ಯಾಕರ್ಷಕ ಕಟ್ಟಡವನ್ನು ಈ ಹಿರೇಬಾವಿ ಹೊಂದಿದೆ.ಈ…

Read More