ತಾಯಿ ಹಾಲು ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಿ: ಡಾ. ಮಾಸ್ತಿಹೊಳಿ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ಮಹತ್ವದ ಕಾರ್ಯಾಗಾರ ಉದ್ಘಾಟನೆ
ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 10:ಅವಧಿಗೂ ಮುನ್ನ ಶಿಶು ಜನನದಿಂದ ಅಮೃತಕ್ಕೆ ಸಮಾನವಾದ ಎದೆಹಾಲು ಲಭ್ಯವಾಗದಿದ್ದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹಾಲಿನ ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಸಮಗ್ರ ಹಾಲುಣಿಸುವಿಕೆಯ ನಿರ್ವಹಣೆ ಕೇಂದ್ರ ಮತ್ತು ತಾಯಂದಿರ ಹಾಲಿನ ಬ್ಯಾಂಕ್ ಹಾಗೂ ಸುಶೇನಾ ಹೆಲ್ತ್ ಫೌಂಡೇಶನ್ ಹೈದ್ರಾಬಾದ ಇವರ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆರೋಗ್ಯ ಸೌಧ…


