ಹೇಮರೆಡ್ಡಿ ಮಲ್ಲಮ್ಮಳ ಬದುಕು ಮನುಕುಲಕ್ಕೆ ಆದರ್ಶ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಮೇ. 10: ಸುಖ-ದುಃಖ, ಅಂಬಲಿ-ಅಮೃತ, ಶತ್ರು-ಮಿತ್ರ, ಸ್ತುತಿ-ನಿಂದನೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿದ ಹೇಮರೆಡ್ಡಿ ಮಲ್ಲಮ್ಮಳ ಬದುಕು ಇಂದಿಗೂ ಅನುಕರಣೀಯ ಹಾಗೂ ಮನುಕುಲಕ್ಕೆ ಆದರ್ಶ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ರವಿವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.ಶಿವಶರಣೆ ಮಲ್ಲಮ್ಮಳ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಸಮಾಜದ ಪ್ರತಿಯೊಬ್ಬರೂ ಮಹಾಸಾದ್ವಿ ಮಲ್ಲಮ್ಮಳ ಆದರ್ಶ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವಳ ದೈವಭಕ್ತಿ, ತಪಸ್ಸು,…

Read More

ಭೂಮಿ ಉಳಿದರೆ ಮನುಸಂಕುಲ ಉಳಿಯಲು ಸಾದ್ಯ

ಸಪ್ತಸಾಗರ ವಾರ್ತೆ ವಿಜಯಪುರ, ಡಿ.6: ಭೂಮಿ ಉಳಿದರೆ ಮನುಸಂಕುಲ ಉಳಿಯಲು ಸಾಧ್ಯ. ಉತ್ತಮ ಪರಿಸರದಿಂದಲೇ ಉತ್ತಮ ಆರೋಗ್ಯ ಹೊಂದಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ನಡವಳಿಕೆ ಹಾಗೂ ವಿಚಾರಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಚಿಂತಕರು, ಇತಿಹಾಸ ತಜ್ಞರು, ಹಿರಿಯ ಅಧಿಕಾರಿಗಳು, ಪರಿಸರ ಪ್ರೇಮಿಗಳು ಹೇಳಿದ್ದಾರೆ.ವೃ,ಕ್ಷಥಾನ್ ಹೆರಿಟೇಜ್ ರನ್-2025ರ ಮುನ್ನಾ ದಿನವಾದ ಇಂದು ಶನಿವಾರ ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾನಾ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಗಣ್ಯರು ಪರಿಸರ ಸಂರಕ್ಷಣೆ, ಪ್ರಾಚೀನ…

Read More

ರಾಣಿ ಚೆನ್ನಮ್ಮ ವಿವಿ ಇತಿಹಾಸ ವಿಭಾಗದ ಮುಖ್ಯಸ ಪ್ರೊ. ಕೆ. ಎಲ್. ಎನ್ ಮೂರ್ತಿ ಅಮಾನತು

ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 23:ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವಿಜಯಪುರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರನ್ನು ಸೇವೆಯಿಃದ ಅಮಾನತು ಮಾಡಲಾಗಿದೆ.ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಪ್ರೊ. ಕೆ. ಎಲ್. ಎನ್. ಮೂರ್ತಿ ಸೇವೆಯಿಂದ ಅಮಾನತುಗೊಂಡವರು.ಪ್ರಾಧ್ಯಾಪಕ ಮೂರ್ತಿ ಅವರು ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿದ್ಯಾರ್ಥಿನಿ ಖುದ್ದಾಗಿ ಭೇಟಿಯಾಗಿ ವಿವಿ ಕುಲಪತಿಗಳಿಗೆ ದೂರು…

Read More

ಮುಂಗಡ ಹಣ ಕೊಡದ್ದಕ್ಕೆ ಒಬ್ಬನನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ : ಇಬ್ಬರ ಸೆರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 19:ಕೆಲಸಕ್ಕೆ ಬರುವುದಾಗಿ ಮುಂಗಡ ಹಣ ಪಡೆದಿದ್ದನ್ನು ವಾಪಸ್ ಕೊಡದೇ ಇರುವುದಕ್ಕೆ ಹಣ ಪಡೆದ ವ್ಯಕ್ತಿಯನ್ನು ಇಬ್ಬರು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.ಚಡಚಣದ ಕುಮಾರ ಉರ್ಪ್ ಅರ್ಜುನ ಬಿರಾದಾರ, ಉಮರಾಣಿ ಗ್ರಾಮದ ಶ್ರೀಶೈಲ ಗಿರಿಯಪ್ಪ ಪೀರಗೊಂಡ ಅವರು ಬಂಧಿತ ಆರೋಪಿಗಳು.ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಬಾಶಾಸಾಬ ಅಲ್ಲಾವುದ್ದೀನ್ ಮುಲ್ಲಾ ಎಂಬಾತ ಡ್ರೈವಿಂಗ್ ಕೆಲಸಕ್ಕೆ ಬರುವುದಾಗಿ 20,000 ರೂ. ಮುಂಗಡವಾಗಿ ಪಡೆದುಕೊಂಡಿದ್ದರು. ಕೆಲಸಕ್ಕೂ…

Read More

ಗುರುಗಳು ಪ್ರಗತಿಪರ ಚಿಂತಕರಾಗಬೇಕು- ಡಾ. ಕನ್ನೂರ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 13:ಗುರುವಿನ ಸ್ಥಾನ ಶ್ರೇಷ್ಠವಾದದ್ದು. ಅವರು ಶಿಷ್ಯರಿಗೆ ಮಾರ್ಗದರ್ಶಕರಾಗಿ ಮುನ್ನಡೆಸುವವರು. ಅವರಿಂದ ಆತ್ಮ ಜ್ಞಾನ ದೊರಕುತ್ತದೆ. ಪರಮಾನಂದವನ್ನು ಹೊಂದಲು ಸಾಧ್ಯವಿದೆ. ಗುರು ಭಗವಂತನ ಪ್ರತಿನಿಧಿಯಾಗಿ ಭೂಮಿಯ ಮೇಲೆ ಇರುತ್ತಾನೆ .ಜಾತಿ ,ಧರ್ಮ ಎಲ್ಲವನ್ನು ಮೀರಿ ಸಮಾನತೆಯ ತತ್ವದಲ್ಲಿ ವಿದ್ಯೆಯನ್ನು ದಾನ ಮಾಡುತ್ತಾನೆ ಎಂದು ಬಿಡಿಈ ಸಂಸ್ಥೆಯ ಪದವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಸುಭಾಷ ಕನ್ನೂರ ಹೇಳಿದರು.ನಗರದ ಆಶ್ರಮರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೆಯ ದೇವಸ್ಥಾನದಲ್ಲಿ ನಡೆದ ೫೪೫ ನೇ ಮಾಸಿಕ ಸತ್ಸಂಗ ಕಾರ್ಯಕ್ರಮದಲ್ಲಿ…

Read More