ಇಬ್ರಾಹಿಂಪುರದಲ್ಲಿ ಸಂಭ್ರಮದ ನಾಡದೇವಿ ಉತ್ಸವ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.30: ನಗರದ ಮನಗೂಳಿ ರಸ್ತೆಯ ಇಬ್ರಾಹಿಂಪುರದಲ್ಲಿ ನಾಡದೇವಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿ ವತಿಯಿಂದ ಸೋಮವಾರ ರಾತ್ರಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಲಾ ಸಿಂಚನ ಮೆಲೋಡಿಸ್ ತಂಡದ ಕಲಾವಿದರಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಮಲ್ಲು ಮುದ್ದೇಬಿಹಾಳ, ಮ್ಯೂಜಿಕ್ ಮೈಲಾರಿ, ಲಕ್ಷ್ಮೀ ಬಿಜಾಪುರ, ಶ್ರೀಶೈಲ ಜುಮನಾಳ, ಗಾಯಕ ಕೃಷ್ಣಾ ಅವರು ಪ್ರಸಿದ್ಧ ಜಾನಪದ ಹಾಗೂ ದೇಶಭಕ್ತಿಯ ಹಾಡುಗಳನ್ನು ಹಾಡಿ, ಹಾಸ್ಯ ಚಟಾಕಿಗಳನ್ನು ಹಾರಿಸಿ ಜನಮನ ರಂಜಿಸಿದರು.ಡಾನ್ಸರ್ ಪೂಜಾ ಡಿಕೆಡಿ…

Read More

ತುಂಬಿದ ಇಬ್ರಾಹಿಂಪುರ ಐತಿಹಾಸಿಕ ‘ಹಿರೇಬಾವಿ’ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಗ್ರಹಣ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 12 : ಇದು ವಿಜಯಪುರ ನಗರದ ಮನಗೂಳಿ- ಬಸವನ ಬಾಗೇವಾಡಿ ರಸ್ತೆ ಪಕ್ಕದ ಇಬ್ರಾಹಿಂಪುರ ಬಡಾವಣೆಯಲ್ಲಿರುವ ಪ್ರಾಚೀನವಾದ ಐತಿಹಾಸಿಕ ಹಿರೇಬಾವಿ. ಇದನ್ನು ವಿಜಯಪುರದ ಎರಡನೇ ‘ತಾಜ್ ಬಾವಡಿ’ ಎಂದರೂ ತಪ್ಪಾಗಲಿಕ್ಕಿಲ್ಲ.ಇಬ್ರಾಹಿಂಪುರದ ಹಿರೇಬಾವಿ ನೋಡಿದ ಯಾರಿಗೇ ಆಗಲಿ ಥಟ್ಟನೆ ‘ತಾಜ್ ಬಾವಡಿ’ ಅವರ ನೆನಪಿಗೆ ಬರದೇ ಇರದು.ತಾಜ್ ಬಾವಡಿಯಂತೆಯೇ ವಿಶಾಲವಾಗಿದೆ ಆದಿಲಶಾಹಿ ಕಾಲದ ಈ ಹಿರೇಬಾವಿ. ನೂರಕ್ಕೂ ಅಧಿಕ ಕಟ್ಟೆಗಳು, ಹಲವು ಕಮಾನುಗಳಿರುವ ಅದ್ಭುತ, ಸುಸಜ್ಜಿತ ಹಾಗೂ ಅತ್ಯಾಕರ್ಷಕ ಕಟ್ಟಡವನ್ನು ಈ ಹಿರೇಬಾವಿ ಹೊಂದಿದೆ.ಈ…

Read More

ಇಬ್ರಾಹಿಂಪುರ ಸುಸಜ್ಜಿತ ರೈಲು ನಿಲ್ದಾಣ ಕಟ್ಟಡಕ್ಕೆ 1.50 ಕೋಟಿ ಮಂಜೂರು

ಸಪ್ತಸಾಗರ ವಾರ್ತೆ,ವಿಜಯಪುರ,ಆ. 11 : ನಗರದಲ್ಲಿರುವ ಇಬ್ರಾಹಿಂಪೂರ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು 1.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರದ ಇಬ್ರಾಹಿಂಪೂರ ಭಾಗದ ಜನತೆಯ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣ ಇರಬೇಕು ಎನ್ನುವ ಕಾರಣಕ್ಕೆ ಆಗ ನಿಲ್ದಾಣ ಆರಂಭಿಸಲು ವಿಶೇಷ ಪ್ರಯತ್ನ ವಹಿಸಿ ಯಶಸ್ವಿಯಾಗಿದ್ದೆನು. ಈ ಇಬ್ರಾಹಿಂಪೂರ ರೈಲ್ವೆ ನಿಲ್ದಾಣ…

Read More