
ಬಿ. ಎಂ. ಪಾಟೀಲ ಫೌಂಡೇಶನ್ ಫಾರ್ ಇನೊವೆಷನ್ ಆ್ಯಂಡ್ ಇನಕ್ಯೂಬೇಶನ್ ಉದ್ಘಾಟನೆ
ಸಪ್ತಸಾಗರ ವಾರ್ತೆ, ವಿಜಯಪುರ, ಜು. 27:ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕ್ಯಾಂಪಸ್ ನಲ್ಲಿ ಬಿ. ಎಂ. ಪಾಟೀಲ ಫೌಂಡೇಶನ್ ಫಾರ್ ಇನೊವೆಷನ್ ಆ್ಯಂಡ್ ಇನಕ್ಯೂಬೇಶನ್ ನ್ನು ಬೆಂಗಳೂರು ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವಾನುಭಾವ ಚರಮೂರ್ತಿ ಶಿವರುದ್ರ ಮಹಾಸ್ವಾಮಿ ರವಿವಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಇದು ಹೊಸ ಆವಿಷ್ಕಾರ ಮತ್ತು ಸ್ಟಾರ್ಟ್‌ಅಪ್ ಎಕೋಸಿಸ್ಟಮ್‌ಗೆ ಮೊದಲ ಮೈಲಿಗಲ್ಲು ಆಗಿದೆ…