ಇಬ್ರಾಹಿಂಪುರದಲ್ಲಿ ಜಯರಾಮೇಶ್ವರ ಮಹಾರಾಜರ ಜಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರರ, ಡಿ.3: ಇಂಚಗೇರಿ ಆ ತತ್ವಧ್ಯಾತ್ಮ ಸಂಪ್ರದಾಯದ ಶಾಖಾಮಠವಾದ ವಿಜಯಪುರ ನಗರದ ಇಬ್ರಾಹಿಂಪುರದ ಶ್ರೀ ಜಯರಾಮೇಶ್ವರ ಮಠದ ಶ್ರೀ ಜಯರಾಮೇಶ್ವರ ಮಹಾರಾಜರ ಪುಣ್ಯಸ್ಮರಣೆ (ಜಾತ್ರಾಮಹೋತ್ಸವ)ಯನ್ನು ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಪುಣ್ಯಸ್ಮರಣೆಯ ಅಂಗವಾಗಿ ಬೆಳಿಗ್ಗೆ ಶ್ರೀ ಜಯರಾಮೇಶ್ವರ ಮಹಾರಾಜರ ಗದ್ದುಗೆಗೆ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.ಮಕ್ಕಳು ಮಹಿಳೆಯರೂ ಸೇರಿದಂತೆ ಬಹುಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಶ್ರೀ ಜಯರಾಮೇಶ್ವರರ ಗದ್ದುಗೆ ದರ್ಶನ ಪಡೆದರು. ಮಧ್ಯಾಹ್ನ ಪುಷ್ಪವೃಷ್ಟಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ನಂತರ ಅನ್ನಸಂತರ್ಪಣೆ ನಡೆಯಿತು.ಶ್ರೀ ಜಯರಾಮೇಶ್ವರ ಮಹಾರಾಜರ ಮಠದ…

Read More