ಅಸಮಾನತೆ ಹೋಗಲಾಡಿಸಲು ಶ್ರಮಿಸಿ: ಪ್ರೊ.ಅಡವಿಸ್ವಾಮಿ
ಸಪ್ತಸಾಗರ ವಾರ್ತೆ, ವಿಜಯಪುರ, ನ. 9:ನೊಂದವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಶೋಷಿತ ವರ್ಗದವರ ದನಿಯಾಗಿ ಮನುಕುಲವನ್ನು ಉದ್ಧಾರ ಮಾಡಿದ ಮಹಾನ್ ಮಾನವತವಾದಿ ಕನಕದಾಸರು ಎಂದು ಸಾಹಿತಿ ಪ್ರೊ. ಅಡವಿಸ್ವಾಮಿ ಕೊಳಮಲಿ ಅಭಿಪ್ರಾಯಪಟ್ಟರು.ವಿಜಯಪುರ ನಗರದ ರೇಲ್ವೆ ನಿಲ್ದಾಣದ ಆವರಣದಲ್ಲಿ ನೈರುತ್ಯ ರೇಲ್ವೆ ಇಲಾಖೆ ನೌಕರರ ಸಂಘ ವಿಜಯಪುರ ಇವರ ವತಿಯಿಂದ ಹಮ್ಮಿಕೊಂಡ ಮಹಾನ್ ಮಾನವತವಾದಿ ಕನಕದಾಸರ 538 ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸವನ್ನು ನೀಡಿದ ಅವರು, ಕನಕದಾಸರು ತಮ್ಮ ವಿಶಿಷ್ಟವಾದ ಜ್ಞಾನದಿಂದ ಶಕ್ತಿಯಿಂದ ಕಣ್ಣಿದ್ದವರ ಕಣ್ಣು ತೆರೆಸಿದ…


