ಅಕ್ಕನಾಗಮ್ಮನವರ ಬದುಕು ಮಹಿಳೆಯರಿಗೆ ಸ್ಫೂರ್ತಿ: ಶರಣಮ್ಮ ಹಾದಿಮನಿ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 6:12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಸತ್ಯ, ಶುದ್ಧ ಕಾಯಕ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಈ ತತ್ವಗಳನ್ನು ತಮ್ಮ ಬದುಕಿನ ಮೂಲಕ ಸಾಕಾರಗೊಳಿಸಿದವರಲ್ಲಿ ಶರಣೆ ಅಕ್ಕನಾಗಮ್ಮ ಪ್ರಮುಖರು ಎಂದು ಉಪನ್ಯಾಸಕಿ ಶರಣಮ್ಮ ಹಾದಿಮನಿ ಹೇಳಿದರು.ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 85ನೇ ಶಿವಾನುಭವ ಗೋಷ್ಠಿಯಲ್ಲಿ ‘ಶರಣೆ ಅಕ್ಕನಾಗಮ್ಮನವರ ಬದುಕು ಮತ್ತು ಅನುಭವ’ ಕುರಿತು ಅವರು ಮಾತನಾಡಿದರು.ಅಕ್ಕನಾಗಮ್ಮ ಅವರು ಬಸವಾದಿ…


