
ನಂಜನಗೂಡು ಮಠದಲ್ಲಿ ಜಯತೀರ್ಥರ ಆರಾಧನೆ: ರಥೋತ್ಸವ, ವಿಶೇಷ ಪೂಜೆ
ಸಪ್ತಸಾಗರ ವಾರ್ತೆ,ವಿಜಯಪುರ,ಜು. 16:ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ಜಯತೀರ್ಥರ ಆರಾ ಧನೆಯನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.ತನ್ನಿಮಿತ್ತ ಬೆಳಿಗ್ಗೆ ಗುರುಸಾರ್ವಭೌಮರ ಅಷ್ಟೋತ್ತರ, ಸುಧಾ ಪಾರಾಯಣ, ಬಳಿಕ ವೃಂದಾವನಕ್ಕೆ ಫಲ ಪಂಚಾ ಮೃತ, ಅಲಂಕಾರ, ಮಹಾಪೂಜೆ ಜರುಗಿದವು. ಶ್ರೀ ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಆನಂತರ ಶ್ರೀ ಮಠದ ಒಳಾವರಣದಲ್ಲಿ ಟೀಕಾರಾಯರ ರಚಿಸಿದ ಗ್ರಂಥಗಳನ್ನು ಹಾಗೂ ಭಾವಚಿತ್ರ ಪುಷ್ಪಗಳನ್ನಿಟ್ಟ ಅಲಂಕೃತ ರಥೋತ್ಸವ ಜರುಗಿತು. ರಥೋತ್ಸವ ಸಮಯದಲ್ಲಿ ದೇವರ ನಾಮಗಳ ಸುಮಧುರ…