ಇಬ್ರಾಹಿಂಪುರದಲ್ಲಿ ಸಂಭ್ರಮದ ನಾಡದೇವಿ ಉತ್ಸವ
ಸಪ್ತಸಾಗರ ವಾರ್ತೆ ವಿಜಯಪುರ, ಸೆ.30: ನಗರದ ಮನಗೂಳಿ ರಸ್ತೆಯ ಇಬ್ರಾಹಿಂಪುರದಲ್ಲಿ ನಾಡದೇವಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಆದಿಶಕ್ತಿ ಯುವಕ ಮಂಡಳಿ ವತಿಯಿಂದ ಸೋಮವಾರ ರಾತ್ರಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಲಾ ಸಿಂಚನ ಮೆಲೋಡಿಸ್ ತಂಡದ ಕಲಾವಿದರಾದ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ, ಮಲ್ಲು ಮುದ್ದೇಬಿಹಾಳ, ಮ್ಯೂಜಿಕ್ ಮೈಲಾರಿ, ಲಕ್ಷ್ಮೀ ಬಿಜಾಪುರ, ಶ್ರೀಶೈಲ ಜುಮನಾಳ, ಗಾಯಕ ಕೃಷ್ಣಾ ಅವರು ಪ್ರಸಿದ್ಧ ಜಾನಪದ ಹಾಗೂ ದೇಶಭಕ್ತಿಯ ಹಾಡುಗಳನ್ನು ಹಾಡಿ, ಹಾಸ್ಯ ಚಟಾಕಿಗಳನ್ನು ಹಾರಿಸಿ ಜನಮನ ರಂಜಿಸಿದರು.ಡಾನ್ಸರ್ ಪೂಜಾ ಡಿಕೆಡಿ…


