
ಪೌರಕಾರ್ಮಿಕರಿಗೆಉಚಿತಮಧುಮೇಹಚಿಕಿತ್ಸೆ: ಡಾ. ಬಾಬುರಾಜೇಂದ್ರನಾಯಕಘೋಷಣೆ
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 3 : ಜಿಲ್ಲೆಯ ಮನಗೂಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರವು ಯಶಸ್ವಿಯಾಗಿ ನೆರವೇರಿತು.ಈ ಶಿಬಿರವನ್ನು ಶ್ರೀ ತುಳಸಿಗಿರೀಶ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಖ್ಯಾತ ಮಧುಮೇಹ ತಜ್ಞ ಡಾ. ಬಾಬುರಾಜೇಂದ್ರ ನಾಯಿಕ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿಯ ತಾಲೂಕಾಧ್ಯಕ್ಷ ಮಹೇಶ ಪಿರಗಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಡಿಎಸ್ ಧುರೀಣ ಸೋಮನಗೌಡ ಪಾಟೀಲ ವಹಿಸಿಕೊಂಡಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವನಾಥಗೌಡ ಪಾಟೀಲ ನೆರವೇರಿಸಿದವರು. ಡಾ. ಬಾಬುರಾಜೇಂದ್ರ…