ರಂಗಭೂಮಿ ಉಳಿದರೆ ನಾಟಕ ಪರಂಪರೆ ಉಳಿಯುತ್ತದೆ
ಜಿಲ್ಲೆಗೊಂದರಂತೆ ನಾಟಕೋತ್ಸವ; ಕಲಾವಿದರಿಗೆ ವೇದಿಕೆ ಕಲ್ಪಿಸುವ ಅಕಾಡೆಮಿ ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 11:ನಾಟಕ ಕೇವಲ ಮನರಂಜನೆಯಲ್ಲ; ಅದು ಸಮಾಜದ ವಾಸ್ತವತೆಯನ್ನು ಪ್ರತಿಬಿಂಬಿಸುವ ಹಾಗೂ ಪರಿವರ್ತನೆಯ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಹೇಳಿದರು.ನಗರದಲ್ಲಿ ಗುರುವಾರ ಸಂಜೆ ಆರಂಭವಾದ ಜಿಲ್ಲಾ ವೃತ್ತಿ ನಾಟಕೋತ್ಸವದ ಮೊದಲ ದಿನದ ‘ಗ್ರಾಮ ಪಂಚಾಯತ ಗಂಗವ್ವ’ ನಾಟಕವನ್ನು ಉದ್ಘಾಟಿಸಿ…


