ಭಾಷೆಯು ಬದುಕಿನ ಅನುಭವದ ಜೀವಾಳ : ಚಿಂತಕ ಲಕ್ಷ್ಮೀಶ ತೋಳ್ಪಾಡಿ
ಸಪ್ತಸಾಗರ ವಾರ್ತೆ,ಬೆಳಗಾವಿ, ಮೇ. 7: ಭಾಷೆ ಎನ್ನುವುದು ಒಂದು ಜೀವಂತ ಪದಾರ್ಥ. ಅದು ನಮ್ಮ ಜೀವನದ ಪ್ರತಿ ಅನುಭವದ ಜೀವಾಳ, ಅದನ್ನು ಬಹಳ ಮುತುವರ್ಜಿಯಿಂದ ಮನಸ್ಸಿನಿಂದ ಬಳಸಬೇಕು. ತಾಂತ್ರಿಕವಾಗಿ ಭಾಷೆಯನ್ನು ಬಳಸುವುದರಿಂದ ಸೃಜನಶೀಲತೆ ಅರಳುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಸಂಘ, ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಕನ್ನಡ ಸಾಹಿತ್ಯ: ಮೌಲ್ಯ” ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಸಾಹಿತ್ಯ ಮತ್ತು ತತ್ವಜ್ಞಾನಕ್ಕೆ ಸಮಾನವಾದ ಸ್ಥಾನವಿದೆ….


