ಭೀಮಾ ನದಿಗೆ ಪ್ರವಾಹ: 8 ಜನರ ರಕ್ಷಣೆ

ರುದ್ರಪ್ಪ ಆಸಂಗಿ ಸಪ್ತಸಾಗರ ವಾರ್ತೆ ವಿಜಯಪುರ, ಸೆ. 27:ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭೀಮಾ ನದಿಗೆ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತವಾಗಿದೆ. ತೋಟದ ಜಮೀನಿನಲ್ಲಿ ನೀರು ಸುತ್ತುವರಿದ ಪರಿಣಾಮ ಮಧ್ಯೆದಲ್ಲಿ ಸಿಲುಕಿಕೊಂಡಿದ್ದ ಎಂಟು ಜನರನ್ನು ರಕ್ಷಿಸಲಾಗಿದೆ.ಜಿಲ್ಲೆಯ ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಪ್ರವಾಹ ಉಂಟಾಗಿ ನದಿ ದಂಡೆ ಜಮೀನುಗಳಿಗೆ ನೀರು ನುಗ್ಗಿದೆ. ನೋಡು ನೋಡುತ್ತಿದ್ದಂತೆಯೇತೋಟದ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನುಗ್ಗಿ ಸಿಲುಕಿದ್ದ 8 ಜನರನ್ನು ಬೋಟ್ ಬಳಸಿ ರಕ್ಷಣೆ…

Read More

ಚಡಚಣ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣ: ಪತ್ತೆಯಾದ ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ, 41.4 ಲಕ್ಷ ನಗದು ವಶಕ್ಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 19:ಚಡಚಣ ಎಸ್‌ಬಿ‌ಐ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರು ಮಹಾರಾಷ್ಟ್ರದ ಹುಲಿಜಂತಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಬಚ್ಚಿಟ್ಟಿದ್ದ ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ ಹಾಗೂ 41.4 ಲಕ್ಷ ರೂಪಾಯಿ ದೊರೆತಿದೆ.ದರೋಡೆಕೋರರು ಚಿನ್ನಾಭರಣ, ನಗದು ಇರುವ ಬ್ಯಾಗ್ ವೊಂದನ್ನು ಹುಲಿಜಂತಿ ಗ್ರಾಮದ ಹಾಳು ಬಿದ್ದ ಮನೆ ಮೇಲ್ಛಾವಣಿ ಮೇಲೆ ಬಿಟ್ಟು ಹೋಗಿರುವುದು ಪೊಲೀಸರ ಕೈಗೆ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಓರ್ವ ದರೋಡೆಕೋರ ಹಾಳು ಬಿದ್ದಮನೆಯ ಮೇಲ್ಚಾವಣಿ…

Read More

ಕುಂಚದಲ್ಲಿ ಪ್ರಾಚೀನ ಸ್ಮಾರಕಗಳ ಸೆರೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.14: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಹಳೆಯ ತಹಶೀಲದಾರ ಕಚೇರಿ ರಸ್ತೆಯಲ್ಲಿರುವ ಎತ್ತರವಾದ ಐತಿಹಾಸಿಕ ಸ್ಮಾರಕ ಸಾಥಮಂಜಿಲ್ ಹಾಗೂ ಜಲಮಂಜಿಲ್ ಬಳಿ ಶನಿವಾರ ಸಂಜೆ ಮಹಾರಾಷ್ಟ್ರದ ಕೊಲ್ಹಾಪುರದ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳು ಗುಂಪು ಗುಂಪಾಗಿ ಕುಳಿತು ಸ್ಮಾರಕಗಳ ಚಿತ್ರಬಿಡಿಸುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯಿತು.ಕೊಲ್ಹಾಪುರದ ಸುಮಾರು 30 ಜನ ಹವ್ಯಾಸಿ ಚಿತ್ರಕಲಾವಿದರು ಹಾಗೂ ವಾಸ್ತುಶಿಲ್ಪಿಗಳನ್ನೊಳಗೊಂಡ ತಂಡವು ಪ್ರಾಚೀನ ಸ್ಮಾರಕಗಳ ಚಿತ್ರ ಬಿಡಿಸುವ ಮೂರು ದಿನಗಳ ಶಿಬಿರವನ್ನು ನಗರದಲ್ಲಿ ಹಮ್ಮಿಕೊಂಡಿದೆ.ಶುಕ್ರವಾರ ಇಬ್ರಾಹಿಂ ರೋಜಾ,…

Read More

ಮಹಾರಾಷ್ಟ್ರ ಡಿಸಿಎಂ ಜೊತೆಗೆ ದ್ರಾಕ್ಷಿ ಬೆಳೆ ಸಮಸ್ಯೆ ಕುರಿತು ಕೊಕರೆ ಚರ್ಚೆ

ಸಪ್ತಸಾಗರ ವಾರ್ತೆ, ಪುಣೆ, ಆ. 29:ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಇತ್ತೀಚೆಗೆ ದ್ರಾಕ್ಷಿ ಬೆಳೆಗಾರರ ಸಮಾವೇಶ ಜರುಗಿತು.ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಕೃಷಿ ಮಂತ್ರಿಗಳ ಜೊತೆಗೆ ಭಾರತೀಯ ಕಿಸಾನ್ ಸಂಘದ ಭೀಮಸೇನ ಕೊಕರೆ ಅವರು ದ್ರಾಕ್ಷಿ ಬೆಳೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ದ್ರಾಕ್ಷಿ ಬೆಳೆಗಾರರ ಮುಂದಿನ ಬೆಳವಣಿಗೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ತಳಿಗಳ ಬಗ್ಗೆ ಹಾಗೂ ರಫ್ತಿನ ಕುರಿತು ಮತ್ತು ಭಾರತ ದೇಶಕ್ಕೆ ಹೊರದೇಶದಿಂದ ಕಳಪೆ ಮಟ್ಟದ ಒಣ ದ್ರಾಕ್ಷಿಯ ಕಳ್ಳ ಸಾಗಣೆಯ ಮೂಲಕ ಬರುತ್ತಿರುವುದರ ಬಗ್ಗೆ…

Read More

ಸಂಸದ ರಮೇಶ ಜಿಗಜಿಣಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ್ ಶಿಂಧೆ ಜೊತೆಗೆ ಸೌಹಾರ್ದ ಭೇಟಿ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 7: ಕೇಂದ್ರದ ಮಾಜಿ ಸಚಿವ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ ಶಿಂಧೆ ಅವರನ್ನು ನವದೆಹಲಿ ನಿವಾಸದಲ್ಲಿ ಸಂಸದ ರಮೇಶ ಜಿಗಜಿಣಗಿ ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದರು.ಸಂಸದ ಜಿಗಜಿಣಗಿ ಅವರು ಶಿಂಧೆ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿ ಸೌಹಾರ್ದಯುತ ಮಾತುಕತೆ ನಡೆಸಿದರು.

Read More

ಮಹಾಬಳೇಶ್ವರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಗಂಗಾ ಪೂಜೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 10:ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿಯ ಉಗಮಸ್ಥಾನವಾದ ನೆರೆ ರಾಜ್ಯ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನದಾತರು ಮಾಜಿ ಸಚಿವ ಸಂಗಣ್ಣ ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ 19 ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮುಂಗಾರು ಆರಂಭವಾಗುವದರೊಂದಿಗೆ ಬರುವ ಕಡ್ಲಿಗರ ಪೂರ್ಣಿಮೆ ದಿನದಂದು ಈ ಭಾಗದ ನೂರಾರು ಮಣ್ಣಿನ ಮಕ್ಕಳು ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಈ…

Read More