ಮಂಡ್ಯ ಭಾಗದಿಂದಲೇ ಹಿಂದೂ ಧ್ರುವೀಕರಣ ಪ್ರಾರಂಭ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 14: ಮೈಸೂರು, ಮದ್ದೂರು ಹಾಗೂ ಮಂಡ್ಯದಿಂದಲೇ ಹಿಂದೂ ಧ್ರುವೀಕರಣ ಪ್ರಾರಂಭವಾಗಿದೆ. ಇದಕ್ಕೆ ಸಾವಿರಾರು ಸಂಖ್ಯೆಗಳಲ್ಲಿ ಸೇರಿದ್ದ ಕಾರ್ಯಕರ್ತರೇ ಸಾಕ್ಷಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಯದುವಂಶದ ಅರಸರ ಆಳ್ವಿಕೆಯಿಂದ ಸಮೃದ್ಧವಾಗಿರುವ ಆ ಭಾಗದಲ್ಲಿ ಹಿಂದೂ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಕಲ್ಲು ತೂರುವುದು, ಅಶಾಂತಿ ಸೃಷ್ಟಿಸುವುದು ಕಳೆದ ಎರಡು ವರ್ಷಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಆಳುವ ಸರ್ಕಾರದ ಅಲ್ಪ ಸಂಖ್ಯಾತ ಓಲೈಕೆ ನೀತಿಯೇ ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ.ನಾಲ್ವಡಿ ಕೃಷ್ಣರಾಜ ಒಡೆಯರ್…


